ಭಾರಿ ಮಳೆಯಿಂದ ಕೊಚ್ಚಿ ಹೋಗಿರುವ ಪಾಲದ ಮೇಲೆ ಶ್ವಾನವೊಂದು ತನ್ನ ಮನೆಯವರತ್ತ ನೋಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಉಪ್ಪುಕಳ ಎಂಬಲ್ಲಿ ಮರದ ಪಾಲ ಬಾರೀ ಮಳೆಗೆ ಕೊಚ್ಚಿ ಹೋಗಿ ೧೨ ಮನೆಗಳ ಸಂಪರ್ಕ ಕಡಿತಗೊಂಡಿದೆ. ಆ ಭಾಗದ ನಾಯಿಯೊಂದು ಮುರಿದಿರುವ ಮರದ ಪಾಲದ ಮೇಲೆ ಕುಳಿತುಕೊಂಡು ಆ ಭಾಗದಲ್ಲಿರುವ ತನ್ನವರ ಕಡೆಗೆ ನೋಡುತ್ತಿದೆ. ಈ ಫೋಟೋ ವೈರಲ್ ಆಗಿದೆ. ಕನಿಷ್ಠ ನಾಯಿಗೂ ತನ್ನ ಮನೆ ಸೇರುವ ತವಕವಿದೆ ಎಂಬ ಒಕ್ಕನೆಯಲ್ಲಿ ಬರೆದು ಕೆಲ ವಾಕ್ಯ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಬಾರೀ ವೈರಲ್ ಆಗಿದೆ. ಚೇತನ್ ಕಜೆಗದ್ದೆ ಎಂಬವರು ತನ್ನ ಫೇಸ್‌ಬುಕ್ ಪೇಜ್ ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.
Kshetra Samachara
13/07/2022 11:40 am