ಮಂಗಳೂರು: ನಗರದ ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಕೃತಕ ಕಾವಿನ ಮೂಲಕ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆ ಒಡೆದು ಹೊರ ಬಂದಿದೆ.
8 ವರ್ಷಗಳ 'ನಾಗಿಣಿ' ಎಂಬ ಹೆಣ್ಣು ಕಾಳಿಂಗ ಸರ್ಪವು 38 ಗಳನ್ನು ಇಟ್ಟಿತ್ತು. ಮೃಗಾಲಯದ ಅಧಿಕಾರಿಗಳು ಅವುಗಳನ್ನು ಪ್ರಯೋಗಾಲಯದಲ್ಲಿ ಕೃತಕ ಕಾವು ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. 76 ದಿನಗಳ ಕಾವಿನ ಬಳಿಕ ಮೊಟ್ಟೆಯೊಡೆದು 38 ಮರಿಗಳು ಹೊರಬಂದಿದೆ. ಜನಿಸುವಾಗಲೇ ವಿಷಪೂರಿತವಾಗಿರುವ ಈ ಕಾಳಿಂಗ ಸರ್ಪದ ಮರಿಗಳು ಸುಮಾರು ಒಂದುವರೆ ಅಡಿ ಉದ್ದವಿರುತ್ತದೆ.
ಈ ಕಾಳಿಂಗನ ಮರಿಗಳಿಗೆ ಒತ್ತಾಯಪೂರ್ವಕವಾಗಿ ಬಾಯಿಗೆ ಆಹಾರವನ್ನು ತಿನ್ನಿಸಲಾಗುತ್ತದೆ. ಮರಿಗಳು ಬೆಳೆದ ಬಳಿಕ ಅವುಗಳನ್ನು ಜನವಸತಿ ಇಲ್ಲದ ಕಾಡು ಪ್ರದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪಿಲಿಕುಳದಲ್ಲಿ ಸದ್ಯ 14 ಕಾಳಿಂಗ ಸರ್ಪಗಳಿವೆ. ಅವುಗಳಲ್ಲಿ 9ಗಂಡು ಹಾಗೂ 5 ಹೆಣ್ಣು ಕಾಳಿಂಗ ಸರ್ಪಗಳಿವೆ.
PublicNext
08/07/2022 09:41 pm