ಉಡುಪಿ: ಜಿಲ್ಲೆಯಾದ್ಯಂತ ಇವತ್ತು ಧಾರಾಕಾರ ಮಳೆಯಾಗುತ್ತಿದೆ. ಉಡುಪಿ ,ಮಣಿಪಾಲ, ಪಡುಬಿದ್ರಿ, ಕಾವು, ಉದ್ಯಾವರ,ಬೈಂದೂರು, ಕುಂದಾಪುರ, ಕಾರ್ಕಳ ಬ್ರಹ್ಮಾವರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಮುಂದಿನ ಮೂರು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ನೀಡಿದೆ. ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಈ ವರ್ಷ ಜೂನ್ ಇಪ್ಪತ್ತು ಕಳೆದರೂ ಮುಂಗಾರು ಪ್ರವೇಶಿಸಿಲ್ಲ. ವಾಡಿಕೆಯಂತೆ ಕೇರಳಕ್ಕೆ ಮುಂಗಾರು ಪ್ರವೇಶಿಸಿ ಕರಾವಳಿಗೆ ಅಪ್ಪಳಿಸಲಿದ್ದು ಇವತ್ತಿನ ಮಳೆ ಮುಂಗಾರು ಮಳೆಯ ಮುನ್ಸೂಚನೆ ನೀಡಿದೆ.
Kshetra Samachara
20/06/2022 07:33 pm