ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ನಾಗಲಿಂಗ ವೃಕ್ಷ ರಕ್ಷಿಸುತ್ತಿರುವ ಪರಿಸರ ಪ್ರೇಮಿಗೊಂದು ಸಲಾಂ

ಮೂಡುಬಿದಿರೆ: ಪ್ರಕೃತಿಯ ನಾಶದಿಂದಾಗಿ ಇಂದು ಹಲವಾರು ಜಾತಿಯ ಗಿಡ-ಮರಗಳು ಕಣ್ಮರೆಯಾಗುತ್ತಿದೆ. ಯಾವುದೇ ಗಿಡ ಮೂಲಿಕೆಯ ಸಸಿಯನ್ನು ಹುಡಕಬೇಕಾದರೆ ಅವುಗಳು ಸಿಗುವುದು ತುಂಬಾನೇ ವಿರಳವಾಗಿದೆ.ಆದ್ದರಿಂದ ಪ್ರಕೃತಿ ವಿಕೋಪಕ್ಕೆ ತಿರುಗಿ ಪರಿಸರದಲ್ಲಿ ಏರುಪೇರು ಉಂಟಾಗಿರುವುದಂತೂ ಸುಳ್ಳಲ್ಲ.

ಅಂತಹದರಲ್ಲಿ ಅಪರೂಪದ ವೃಕ್ಷವೊಂದು ಇಂದು ಅಳಿವಿನಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸಿ ಅದರ ಪ್ರಯೋಜನವನ್ನು ಜನರು ಪಡೆಯಬೇಕೆನ್ನುವ ನಿಟ್ಟಿನಲ್ಲಿ ನಿಡ್ಡೋಡಿಯ ವಿನೇಶ್ ಪೂಜಾರಿ ವೃಕ್ಷ ರಕ್ಷಣೆಗೆ ಅಡಿಪಾಯ ಹಾಕಿದರು.

ಆಧುನೀಕರಣಗೊಳ್ಳುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಅದೆಷ್ಟೋ ಜೀವರಾಶಿಗಳು ಅಳಿದು ಹೋಗಿದ್ದು, ಅಳಿವಿನ ಅಂಚಿನಲ್ಲಿರುವ ಅನೇಕ ಗಿಡ, ವೃಕ್ಷಗಳಲ್ಲಿ ನಾಗಲಿಂಗ ವೃಕ್ಷವು ಒಂದಾಗಿದ್ದು, ತನ್ನದೇ ಆದ ವಿಶೇಷತೆಯನ್ನು ಈ ಮರವು ಹೊಂದಿದೆ. ನಿಡ್ಡೋಡಿಯ ವಿನೇಶ್ ಪೂಜಾರಿ ಈ ಮರವನ್ನು ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ವಿಶೇಷ ಆಸಕ್ತಿಯನ್ನು ತೋರಿದ್ದಾರೆ.

ವಿನೇಶ್ ಅವರಿಗೆ ವಿಶೇಷವಾಗಿ ಕಂಡ ನಾಗಲಿಂಗ ವೃಕ್ಷದ ತಳಿಯನ್ನು ಉಳಿಸುವ ಪಣ ತೊಟ್ಟರು. ಈ ಬೀಜವನ್ನು ಸಂಗ್ರಹಣೆ ಮಾಡುತ್ತಾ ಇದೀಗ 500 ಕ್ಕೂ ಅಧಿಕ ನಾಗಲಿಂಗ ಗಿಡಗಳನ್ನು ಸ್ವತಃ ತಾವೇ ಬೆಳೆಸಿ ದೇಗುಲಗಳಿಗೆಲ್ಲಾ ಉಚಿತವಾಗಿ ನೀಡಿ ಅವುಗಳ ರಕ್ಷಣೆ ಮಾಡುತ್ತಾ ಬಂದಿದ್ದಾರೆ.

ನಾಗಲಿಂಗ ವೃಕ್ಷವು ಬೃಹತ್ ಗಾತ್ರದಲ್ಲಿ ಬೆಳೆದು, ಬೀಳಲುಗಳಲ್ಲಿ ಹೂವು ಬಿಟ್ಟು, ದೊಡ್ಡ ದೊಡ್ಡ ಗಾತ್ರದ ಕಾಯಿ ಬಿಡುತ್ತದೆ. ಇದರ ಹೂವು 6 ದಳಗಳಿಂದ ಕೂಡಿದ್ದು, ಇದರ ದಳದ ಕೆಳಭಾಗ ಹಳದಿ ಬಣ್ಣವನ್ನು ಹೊಂದಿದು, ಹೂವಿನ ಮಧ್ಯ ಭಾಗದಲ್ಲಿ ಲಿಂಗಾಕೃತಿಯನ್ನು ಹೊಂದಿದೆ. ಲಿಂಗಕ್ಕೆ ಹಾವಿನ ಹೆಡೆಯಂತೆ ಬಾಗಿಕೊಂಡಿದೆ. ಇದನ್ನು ಆಯುರ್ವೇದಗಳಲ್ಲಿ ಔಷಧಿಯನ್ನಾಗಿ ಬಳಸುತ್ತಾರೆ. ಈ ವೃಕ್ಷವು ಕೆಲವೊಂದು ದೇಗುಲಗಳಲ್ಲಿಯೂ ಕಾಣಸಿಗುತ್ತದೆ.

ಹಿಂದೂ ಧರ್ಮದಲ್ಲಿ ಈ ವೃಕ್ಷಕ್ಕೆ ವಿಶೇಷವಾದ ಭಕ್ತಿ, ಗೌರವವನ್ನು ಸಲ್ಲಿಸಲಾಗುತ್ತದೆ. ಇದು ಪ್ರಕೃತಿಗೂ ದೇವರಿಗೂ ಇರುವ ಸಂಬಂಧವನ್ನು ತಿಳಿಸುತ್ತದೆ. ಈ ವೃಕ್ಷವನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕೆಂಬ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೂ ಈ ಮರವು ಪರಿಚಿತವಾಗಬೇಕೆಂಬುದು ವಿನೇಶ್ ಅವರ ಕನಸಾಗಿದೆ.

ಇದುವರೆಗೂ 500ಕ್ಕೂ ಅಧಿಕ ಗಿಡಗಳನ್ನು ಬೆಳೆಸಿ, ಹಲವಾರು ದೇವಾಲಯಗಳಿಗೆ ನೀಡಿರುವ ವಿನೇಶ್ ಪೂಜಾರಿ ನಿಡೋರಿ ಮುಂದಿನ ದಿನಗಳಲ್ಲಿ 2000 ಕ್ಕೂ ಹೆಚ್ಚು ನಾಗಲಿಂಗ ವೃಕ್ಷವನ್ನು ಬೆಳೆಸಬೇಕೆಂಬ ಗುರಿ ಹೊಂದಿದ್ದಾರೆ. ಈ ವೃಕ್ಷವು ಇನ್ನೂ ಪ್ರಚಲಿತವಾಗಲಿ, ಹಾಗೆಯೇ ಅಳಿವಿನಂಚಿನಲ್ಲಿರುವ ಮರಗಳನ್ನುಸರಂಕ್ಷಿಸಬೇಕೆಂಬ ವಿನೇಶ್ ಅವರ ನಿಸ್ವಾರ್ಥ ಪರಿಸರ ಪ್ರೇಮ ಎಲ್ಲಾರಿಗೂ ಪ್ರೇರಣೆಯಾಗಲಿ ಎಂಬುದೇ ನಮ್ಮೆ ಆಶಯ.

Edited By : Manjunath H D
Kshetra Samachara

Kshetra Samachara

31/05/2022 08:24 am

Cinque Terre

13.08 K

Cinque Terre

0

ಸಂಬಂಧಿತ ಸುದ್ದಿ