ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪರಿಸರ ಪ್ರೇಮಿಯ ಮನೆ ಅಂಗಳದಲ್ಲಿದೆ ದೇಶ, ವಿದೇಶದ ಡಿಫರೆಂಟ್ ಹೂಗಳು

ಪುತ್ತೂರು: ಪ್ರತಿ ಮನೆಯಂಗಳದಲ್ಲಿ ಹೂದೋಟ ಮಾಡಿ ಭಿನ್ನ-ಭಿನ್ನ ರೀತಿಯ ಹೂವುಗಳನ್ನು ಬೆಳೆಸೋದು ಇತ್ತೀಚಿನ ದಿನಗಳ ಫ್ಯಾಷನ್ ಆಗಿದೆ.

ಗಿಡವೇ ಜೀವನ, ಹಸಿರ ನಡುವೆ ಬದುಕುವುದೇ ಒಂದು ಸಂಭ್ರಮ ಎನ್ನುವ ಧೈಯದೊಂದಿಗೆ ಬದುಕು ಸಾಗಿಸುತ್ತಿರುವ ಅಪ್ಪಟ ಹಸಿರ ಪ್ರೇಮಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ನಾನಾ ರೀತಿಯ ಹೂವಿನ ಗಿಡಗಳನ್ನು ಇವರು ತಮ್ಮ ಮನೆಯಂಗಳದಲ್ಲಿ ಬೆಳೆಸುತ್ತಿದ್ದು, ವಿವಿಧ ದೇಶಗಳಿಂದ ತಂದ ವಾಟರ್ ಲಿಲ್ಲಿ ಮತ್ತು ತಾವರೆ ಗಿಡಗಳು ಇವರ ಗಿಡಗಳ ಕಲೆಕ್ಷನ್‌ಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಂಗೊಳಿಸುತ್ತಿವೆ.

ಮನೆ ಅಂಗಳ ತುಂಬಾ ಹಸಿರನ್ನೇ ಬೆಳೆಸಿರುವ ಪ್ರಕೃತಿ ಪ್ರೇಮಿಗಳ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪರ್ಪುಂಜದ ಚಂದ್ರ ಸೌಗಂಧಿಕ ಕೂಡಾ ಸೇರುತ್ತಾರೆ. ವಿವಿಧ ಕಡೆಗಳಿಂದ ವಿಶೇಷ ಹೂವುಗಳ ಗಿಡಗಳನ್ನು ತಂದು ಬೆಳೆಸಿ, ಪೋಷಿಸಿಕೊಂಡು ಬರುತ್ತಿರುವ ಚಂದ್ರ ಸೌಕಂಧಿಕ, ಆಸಕ್ತರಿಗೆ ನೀಡುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಅಲ್ಲದೆ ಇವರಲ್ಲಿ ಸುಮಾರು 10ಕ್ಕೂ ಅಧಿಕ ವಿವಿಧ ಜಾತಿಯ ತಾವರೆ ಗಿಡಗಳೂ ಇದ್ದು, ಬಿಳಿ, ಕೆಂಪು, ಗುಲಾಬಿ, ನೇರಳೆ, ಹಳದಿ ಹೀಗೆ ಎಲ್ಲಾ ಬಣ್ಣದ ತಾವರೆಗಳು ಇವರ ಅಂಗಳದಲ್ಲಿ ಪ್ರತಿದಿನವೂ ಅರಳುತ್ತಿದ್ದು, ಇವುಗಳ ಅಂದ ಹಾಗೂ ಕಂಪು ಇಲ್ಲಿಗೆ ಭೇಟಿ ನೀಡುವವರ ಮನವನ್ನು ಸೆಳೆಯುತ್ತದೆ.

Edited By : Shivu K
PublicNext

PublicNext

18/05/2022 07:05 pm

Cinque Terre

64.97 K

Cinque Terre

1

ಸಂಬಂಧಿತ ಸುದ್ದಿ