ಮಣಿಪಾಲ : ಮಣಿಪಾಲ ಪರಿಸರದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ.ಬೀದಿ ನಾಯಿಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿದ ಮಂಗದ ಕಳೇಬರವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮಣಿಪಾಲ ಟ್ರೀ ಪಾರ್ಕಿನ ಸಿಬ್ಬಂದಿಗಳಾದ ಶರಣಪ್ಪ, ಸಂತೋಷ ಅವರು ದಹನ ಮೂಲಕ ಅಂತ್ಯಸಂಸ್ಕಾರವನ್ನು ಪಾರ್ಕಿನ ಆಯಕಟ್ಟಿನ ಸ್ಥಳದಲ್ಲಿ ನಡೆಸಿದರು.
ಮೃತಪಟ್ಟಿರುವ ಒಂಟಿ ಮಂಗವು ಕೆಲವು ದಿನಗಳಿಂದ ಮಣಿಪಾಲದಲ್ಲಿ ನೆಲೆ ಕಂಡಿತ್ತು. ಇವತ್ತು ಬೀದಿ ನಾಯಿಯ ದಾಳಿಗೆ ತುತ್ತಾಗಿ ಮಂಗವು ಸಾವನಪ್ಪಿದೆ ಎಂದು ಸ್ಥಳೀಯರಾದ ಅಶೋಕ ಅವರು ಮಾಹಿತಿ ನೀಡಿದ್ದಾರೆ.
Kshetra Samachara
15/04/2022 02:25 pm