ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪ್ಲಾಸ್ಟಿಕ್ ಟ್ಯಾಂಕ್ ಬಳಸಿ ಗೊಬ್ಬರ ಅನಿಲ ಆವಿಷ್ಕಾರ ಮಾಡಿದ ಗ್ರಾಮೀಣ ಪ್ರತಿಭೆ

ಕೆದೂರು: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಮೂಡುಕೆದೂರಿನಲ್ಲಿ ಆಟೋ ಚಾಲಕರಾಗಿರುವ ವಾಸು ಮೊಗವೀರ ಅವರು 3 ಸಾವಿರ ವೆಚ್ಚದಲ್ಲಿ ಪ್ಲಾಸ್ಟಿಕ್ ಟ್ಯಾಂಕ್ ಬಳಸಿಕೊಂಡು ಗೊಬ್ಬರ ಅನಿಲ ಘಟಕವನ್ನು ಆವಿಷ್ಕಾರ ಮಾಡಿ ಮಾದರಿಯಾಗಿದ್ದಾರೆ.

ಸಿಲಿಂಡರ್ ಬೆಲೆ ಏರುತ್ತಿರುವ ಇಂದಿನ ದಿನಮಾನಗಳಲ್ಲಿ ಕಡಿಮೆ ಖರ್ಚಿನಲ್ಲಿ ಗೊಬ್ಬರ ಅನಿಲ ಘಟಕ ಮಾಡಿ ಸೈ ಎನಿಸಿಕೊಂಡಿರುವ ಇವರು ಸದಾ ಕ್ರಿಯಾಶೀಲತೆಯಿಂದ ಹೈನುಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡು ನ್ಯಾನೋ ಗ್ಯಾಸ್ ಘಟಕ ಸ್ಥಾಪಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆ ಏನಾದರೂ ಮಾಡಿ ಪರ್ಯಾಯ ಮಾರ್ಗ ಹುಡುಕಬೇಕು ಎನ್ನುವ ಗುರಿ ಇಟ್ಟುಕೊಂಡು ಗ್ರಾಮೀಣ ನ್ಯಾನೋ ಗ್ಯಾಸ್ ಕಂಡುಹಿಡಿಯುವ ಸಾಧನೆ ಮಾಡಿದ್ದಾರೆ.

Edited By : Manjunath H D
PublicNext

PublicNext

11/04/2022 02:03 pm

Cinque Terre

63.85 K

Cinque Terre

1

ಸಂಬಂಧಿತ ಸುದ್ದಿ