ಮಲ್ಪೆ: ಸಮುದ್ರದ ನಡುವೆ ತಾಂತ್ರಿಕ ದೋಷದಿಂದ ಅಪಾಯಕ್ಕೆ ಸಿಲುಕಿದ್ಸ ಮೀನುಗಾರಿಕಾ ಬೋಟ್ ಹಾಗೂ ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಲ್ಪೆಯ ಶ್ರೀರಾಮ ಎಂಬ ಮೀನುಗಾರಿಕಾ ಬೋಟ್ ತಾಂತ್ರಿಕ ತೊಂದರೆಯಿಂದ ಅಳಿವೆ ಭಾಗದಲ್ಲಿ ಕಲ್ಲಿನ ಸಮೀಪಕ್ಕೆ ಬಂದು ಅಪಾಯದ ಸ್ಥಿತಿಯಲ್ಲಿ ನಿಂತಿತ್ತು. ಇದನ್ನು ಗಮನಿಸಿದ ಮಲ್ಪೆ ಸಿಎಸ್ ಪಿ ಹಾಗೂ ಠಾಣೆಯ ಸಮುದ್ರ ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಅಲ್ಲಿಗೆ ತೆರಳಿ ಕೆಟ್ಟುನಿಂತಿದ್ದ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ತಂದಿದ್ದಾರೆ.
Kshetra Samachara
03/01/2022 11:44 am