ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಶ್ರೀ ತಾಳೆ' ಗೆ ಜೀವದಾನ; ಇದು 'ಪಬ್ಲಿಕ್ ನೆಕ್ಸ್ಟ್' ಇಂಪ್ಯಾಕ್ಟ್

ವರದಿ: ರಹೀಂ ಉಜಿರೆ

ಉಡುಪಿ: ಶ್ರೀ ತಾಳೆ ಮರ ಮೌಢ್ಯಕ್ಕೆ ಬಲಿಯಾಗುವ ಹಂತಕ್ಕೆ ತಲುಪಿ ಕೊನೆಗೂ ಉಳಿದುಕೊಂಡಿದೆ. ಹೌದು. ಕಳೆದ ಭಾನುವಾರ ಈ ಮರವನ್ನು ಶಾಸ್ತ್ರೋಕ್ತವಾಗಿ ಕಡಿಯಲು ಎಲ್ಲ ಸಿದ್ಧತೆ ನಡೆದಿದ್ದವು. ಅದಕ್ಕೆ ಮುನ್ನ ದಿನ "ತಾಳೆ ಮರ ಉಳಿಸಿ" ಎಂದು ಪಬ್ಲಿಕ್ ನೆಕ್ಸ್ಟ್ ಸವಿಸ್ತಾರ ವರದಿ ಪ್ರಕಟಿಸಿತ್ತು. ಇದರ ಇಂಪ್ಯಾಕ್ಟ್ ಎಂಬಂತೆ ಕೊನೆ ಕ್ಷಣದಲ್ಲಿ ಮರ ಕಡಿಯುವ ನಿರ್ಧಾರದಿಂದ ಗ್ರಾಮಸ್ಥರು ಹಿಂದೆ ಸರಿದಿದ್ದಾರೆ!

ತಾಳೆ ಮರದಲ್ಲಿ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ಮೂಢನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಇದೇ ಕಾರಣಕ್ಕೆ ವೇಣೂರಿನ ಕರಿಮಣೇಲು ಗ್ರಾಮದಲ್ಲಿ ಹೂ ಬಿಟ್ಟ ತಾಳೆ ಮರ ಕಡಿಯಲು ಗ್ರಾಮಸ್ಥರು ಮುಂದಾಗಿ, ಎಲ್ಲ ಸಿದ್ಧತೆಯೂ ನಡೆದಿತ್ತು. ಇದು 'ಪಬ್ಲಿಕ್ ನೆಕ್ಸ್ಟ್' ಗಮನಕ್ಕೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ತಾಳೆ ಮರದ ಇತಿಹಾಸ, ಮಹತ್ವ ಮತ್ತು ಅದನ್ನು ಉಳಿಸಬೇಕಾದ ಅಗತ್ಯದ ಬಗ್ಗೆ ಪರಿಸರ ಪ್ರಿಯರ ಹೇಳಿಕೆಯೊಂದಿಗೆ ವರದಿ ಪ್ರಕಟಿಸಿತ್ತು. ಇದರ ಫಲಶ್ರುತಿ ಎಂಬಂತೆ ಭಾನುವಾರ ಮರ ಕಡಿಯಲು ಮುಂದಾಗಿದ್ದ ಗ್ರಾಮಸ್ಥರು, ಮರ ಕಡಿಯದಿರಲು ನಿರ್ಧರಿಸಿದರು.

80 ವರ್ಷದಷ್ಟು ಹಳೆಯ ಶ್ರೀತಾಳೆ ಅಥವಾ ಪಣೋಲಿ ಮರ ಉಳಿಸುವಲ್ಲಿ ಪರಿಸರ ಪ್ರೇಮಿ ಕೃಷ್ಣಯ್ಯ ಮತ್ತು ಗಣೇಶ್ ಅವರ ಪಾತ್ರವೂ ದೊಡ್ಡದು. ಮೊನ್ನೆಯ ಘಟನೆಯಿಂದ ಸ್ಫೂರ್ತಿಗೊಂಡ ಇವರು, ಇನ್ನು‌ ಮುಂದೆ ಶಾಲೆ- ಕಾಲೇಜುಗಳಲ್ಲಿ ತಾಳೆ ಮರದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಮತ್ತು ಮರ ಉಳಿಸಲು ಸಹಕರಿಸಿದ್ದಕ್ಕೆ ಮಾಧ್ಯಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದೊಂದು ಮರದ ವಿಷಯ ಇರಬಹುದು. ಆದರೆ, ಇಡೀ ಗ್ರಾಮವೇ ಮೌಢ್ಯಕ್ಕೆ ಬಲಿಯಾಗಿ ಅಳಿವಿನಂಚಿನಲ್ಲಿರುವ ಮರ ಉಳಿಸಿದ ಮತ್ತು ಜನರಿಗೆ ಒಂದು ಉತ್ತಮ ಸಂದೇಶ ಕೊಟ್ಟ ಖುಷಿ, ಸಾರ್ಥಕತೆ 'ಪಬ್ಲಿಕ್ ನೆಕ್ಸ್ಟ್' ಗಿದೆ.

Edited By : Manjunath H D
Kshetra Samachara

Kshetra Samachara

23/11/2021 01:49 pm

Cinque Terre

25.29 K

Cinque Terre

0

ಸಂಬಂಧಿತ ಸುದ್ದಿ