ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಸ್ತೆ ಇಕ್ಕೆಲಗಳಲ್ಲಿ 75 ಗಿಡ ನೆಡುವ ಮೂಲಕ ಶ್ರಮದಾನ

ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವತಿಯಿಂದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶಿಮಂತೂರು ರಕ್ತೇಶ್ವರಿ ಗುಡಿಯ ಬಳಿಯಿಂದ 75 ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಬಳಿಕ ಶಿಮಂತೂರು ಯುವಕ, ಯುವತಿ ಮಂಡಲ ಹಾಗೂ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು, ಸಿಬ್ಬಂದಿಗಳಿಂದ ರಸ್ತೆಬದಿಯ ಕಾಡು ಗಿಡ ತೆರವುಗೊಳಿಸುವುದರ ಮೂಲಕ ಶ್ರಮದಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಮೂಲಕ ಮಾರಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಹಾಗೂ ಸ್ವಚ್ಛತೆ ಹಾಗೂ ಶ್ರಮಧಾನದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ 75 ವಾರ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ಸದಸ್ಯರಾದ ಕೃಷ್ಣ ಶೆಟ್ಟಿಗಾರ್ ಅಂಗರಗುಡ್ಡೆ, ಪದ್ಮಿನಿ ಶೆಟ್ಟಿ, ವೇದಾವತಿ,ಮಾಜೀ ಸದಸ್ಯ ಹರೀಶ್ ಶೆಟ್ಟಿ, ಶಿಮಂತೂರು,ಕಿಶೋರ್ ಶೆಟ್ಟಿ ಪರೆಂಕಿಲ, ಶಿಮಂತೂರು ಯುವಕ ಮಂಡಲ ಹಾಗೂ ಯುವತಿ ಮಂಡಲದ ಸದಸ್ಯರು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Edited By : Manjunath H D
Kshetra Samachara

Kshetra Samachara

08/08/2021 01:01 pm

Cinque Terre

15.61 K

Cinque Terre

0

ಸಂಬಂಧಿತ ಸುದ್ದಿ