ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ಸ್ಯಬೇಟೆಗೆ ಬೋಟ್ ಗಳ ಲಗ್ಗೆ; ಅಲೆಗಳ ತಡೆ

ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಯಾಂತ್ರೀಕೃತ ಕಡಲ ಮೀನುಗಾರಿಕೆಯ ನಿಷೇಧ ಕಾಲಾವಧಿ ಜುಲೈ 31ಕ್ಕೇ ಮುಕ್ತಾಯಗೊಂಡಿದೆ. ಈಗ ಏನಿದ್ದರೂ ಮುಕ್ತ ಮೀನುಗಾರಿಕೆಯ ಋತುಕಾಲ. ಆದರೆ, ಹವಾಮಾನ ವೈಪರೀತ್ಯಗಳೆಲ್ಲ ಕಡಿಮೆಯಾಗಿ, ಸಂಪೂರ್ಣ ಮೀನುಗಾರಿಕೆ ನಿಜವಾಗಿ ಆರಂಭವಾಗುವುದು ಸೆಪ್ಟೆಂಬರ್ ತಿಂಗಳಿನಿಂದಲೇ.

ಸುಮಾರು 20 ವರ್ಷಗಳ ಹಿಂದೆ ಸೆಪ್ಟೆಂಬರ್ ಒಂದರಂದೇ ಯಾಂತ್ರೀಕೃತ ಸಮುದ್ರ ಮೀನುಗಾರಿಕೆ ಆರಂಭಗೊಳ್ಳುತ್ತಿತ್ತು. ಕಾಲಕ್ರಮೇಣ ಅವಧಿ ಬದಲಾಯಿತು. ಡೀಪ್ ಸೀ ಬೋಟ್ ಗಳು ಮೊದಲಾಗಿ ಕಡಲಿಗೆ ಧಾವಿಸುತ್ತವೆ. ಮಳೆಗಾಲ ಇನ್ನೂ ಮುಗಿಯದ್ದರಿಂದ ಕಡಲಲ್ಲಿ ಜೋರುಗಾಳಿ ಸಹಿತ ಅಲೆಗಳ ಅಬ್ಬರವಿದೆ.

ಮಂಗಳೂರು, ಉಡುಪಿ, ಉತ್ತರ ಕನ್ನಡ ಕರಾವಳಿಯಲ್ಲೀಗ ಕೆಲವು ಆಳಕಡಲ ಬೋಟ್ ಮೀನುಗಾರರು ಗಾಳಿ- ಮಳೆ ಸಹಿತ ದೈತ್ಯ ಅಲೆಗಳ ಪ್ರಹಾರಕ್ಕೂ ಅಳುಕದೆ, ಮತ್ಸ್ಯ ಶಿಕಾರಿಯಲ್ಲಿ ತೊಡಗಿದ್ದಾರೆ.

- ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

06/08/2021 03:29 pm

Cinque Terre

11.42 K

Cinque Terre

0

ಸಂಬಂಧಿತ ಸುದ್ದಿ