ಉಡುಪಿ: ಕರವಾಳಿಯ ತಿನಿಸುಗಳಿಗೆ ಎಲ್ಲೆಡೆ ಬಾರೀ ಬೇಡಿಕೆ. ಸದ್ಯ ಕೃಷ್ಣನಗರಿಯಲ್ಲಿ ಮಳೆಯೊಂದಿಗೆ ಕಲ್ಲಣಬೆ ರುಚಿ ಸವಿಯುವುದೇ ಒಂದು ಅದ್ಭುತ ಅನುಭವ.
ಕರಾವಳಿಯ ವಿಶೇಷ ಖಾದ್ಯಗಳಲ್ಲಿ ಕಲ್ಲಣಬೆ ಖಾದ್ಯ ಕೂಡ ಒಂದು..ಇದನ್ನು ಕರಾವಳಿಯಲ್ಲಿ ಕಲ್ಲಲಾಂಬು ಅಂತಾರೆ. ಮಳೆಗಾಲದಲ್ಲಿ ಮಾತ್ರ ಈ ರುಚಿ ತಯಾರಾಗುತ್ತೆ.ಮಳೆಗಾಲದಲ್ಲಿ ಜೋರಾಗಿ ಗುಡುಗು ಬಂದಾಗ ಗುಡ್ಡ ಪ್ರದೇಶದ, ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ, ಮಣ್ಣಿನ ಮೇಲ್ಪದರದಲ್ಲಿ ಈ ಕಲ್ಲಣಬೆ ಹುಟ್ಟಿಕೊಳ್ಳತ್ತದೆ.ಮಳೆಗಾಲದಲ್ಲಿ ಉಡುಪಿ ಭಾಗದ ಸರಳಬೆಟ್ಟು ಪರಿಸರದಲ್ಲಿ ಹೆಚ್ಚಾಗಿ ಕಂಡುಬರುವ ಈ ಕಲ್ಲಣಬೆಯನ್ನು, ಇಲ್ಲಿನ ಯುವಕರ ತಂಡವೊಂದು ಬೆಟ್ಟಕ್ಕೆ ಹತ್ತಿ ಕಲ್ಲಣಬೆ ಹುಡುಕಿ ತೆಗೆಯುತ್ತಾರೆ.
ಮಣ್ಣಿನ ಪಾತ್ರೆಯಲ್ಲಿ ಕಟ್ಟಿಗೆ ಒಲೆಯಲ್ಲಿ ತಯಾರಿಸಿದ ಕಲ್ಲಣಬೆ ಪದಾರ್ಥ ಸಿಕ್ಕಾಪಟ್ಟೆ ಟೇಸ್ಟ್. ಕಲ್ಲಣಬೆ ನಾನ್‌ವೆಜ್ ರುಚಿಯ ಹೋಲಿಕೆ ಇದೆ, ಆದ್ರೆ ಇದನ್ನು ಸಸ್ಯಹಾರಿಗಳೂ ಸೇವಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೆಜಿಗೆ ಎಂಟುನೂರರಿಂದ ಒಂದು ಸಾವಿರದವರೆಗೂ ಬೇಡಿಕೆ ಇದೆ.ಅಂದಹಾಗೆ ಇದು ವೆಜ್ ನವರ ನಾನ್ ವೆಜ್ ಅಡುಗೆ ಎಂದರೂ ತಪ್ಪಲ್ಲ!
ಜಿಟಿ ಜಿಟಿ ಮಳೆ, ಚುಮು ಚುಮು ಚಳಿಗೆ ಅಡುಗೆ ಮನೆಯಲ್ಲಿ ಕಲ್ಲಣಬೆ ಪದಾರ್ಥ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು! ನೀವೂ ಒಮ್ಮೆ ಇದರ ರುಚಿ ನೋಡಿ.
Kshetra Samachara
31/07/2021 02:47 pm