ಪಡುಬಿದ್ರಿ: ಮನಸೆಳೆದ ನವಿಲಿನ ನರ್ತನ : ನೋಡುಗರಲ್ಲಿ ಸಂತಸ ಮೂಡಿಸಿತು.

ಪಡುಬಿದ್ರಿ: ರಾಷ್ಟ್ರಪಕ್ಷಿ ನವಿಲೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.! ಅದರಲ್ಲೂ ರೆಕ್ಕೆ ಬಿಚ್ಚಿ ಕುಣಿಯುವ ಗಂಡು ನವಿಲೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ನವಿಲೆಂದರೆ ಸಾಕು ಎಂತವರು ಒಮ್ಮೆ ಹಿಂತಿರುಗಿ ನೋಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ನವಿಲುಗಳು ಕಾಡಲ್ಲಿ ಆಹಾರ ಸಿಗದೆ‌ ನಾಡಿನತ್ತ ಪ್ರಯಾಣ ಬೆಳೆಸುತ್ತಿವೆ.ಕೆಲವೊಮ್ಮೆ ರಸ್ತೆ ದಾಟುತ್ತಿರುವುದು ನಾವು ನೋಡುತ್ತೇವೆ.ಇನ್ನು ಕೆಲವೊಮ್ಮೆ ಗದ್ದೆಗಳಲ್ಲಿ ಕಾಣ ಸಿಗುತ್ತವೆ.ಅಂದ ಹಾಗೆ ಬುಧವಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಕಲ್ಲಟ್ಟೆ ಜಾರಂದಾಯ ದೇವಸ್ಥಾನದ ಗದ್ದೆಯಲ್ಲಿ ಗಂಡು ನವಿಲೊಂದು ತನ್ನ ನಾಟ್ಯದ ಮನಮೋಹಕ ದೃಶ್ಯದ ಮೂಲಕ, ಒಂದು ಕ್ಷಣ ಎಲ್ಲರನ್ನೂ ತನ್ನತ್ತ ನೊಡುವಂತೆ ಮಾಡಿತು.

ತಮ್ಮ ಎದುರಲ್ಲೇ ಈ ಸುಂದರವಾದ ನವಿಲಿನ ನೃತ್ಯವನ್ನು ಕಂಡ ಜನ ಕಣ್ತುಂಬಿಕೊಂಡರು.ಕೆಲವರಂತೂ ತಮ್ಮ ಮೊಬೈಲ್‌ಗಳಲ್ಲಿ ಅವುಗಳನ್ನು ಸೆರೆ ಹಿಡಿದು ಸಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುದರಲ್ಲಿ ನಿರತರಾಗಿದ್ದರು.ಒಟ್ಟಾರೆಯಾಗಿ ಕ್ಷಣ ಕಾಲದ ನವಿಲಿನ ನೃತ್ಯ ವೈಭವ ನೋಡುಗರಲ್ಲಿ ಸಂತಸವನ್ನು ಮೂಡಿಸಿತು.

Kshetra Samachara

Kshetra Samachara

30 days ago

Cinque Terre

11.57 K

Cinque Terre

4

 • Mahfooz Ur Rahman
  Mahfooz Ur Rahman

  👎 kelagina comment Nayiya videoge sammnda pattadu

 • Mahfooz Ur Rahman
  Mahfooz Ur Rahman

  Edu Nijavada Maanaviyathe . Kastadalliruva Prani , Pakshi haagu maanavarige sahaya maduwoodu haagu Maanaviyatheinda kaanuwoodu Manushana paramodharma agirabeku . Edaralli Jathi Dharma hudukabaradu .

 • Mahfooz Ur Rahman
  Mahfooz Ur Rahman

  Athi Sundara . Manassu punha punah nodalu hathoraithade . Excellent Dance. Feel like watching it again and again .

 • harish
  harish

  idu daily nodtivi idaralli yenide visheshate