ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಧರೆಗುರುಳಿದ ಹದ್ದು!; ಹಕ್ಕಿಜ್ವರ ಸದ್ದು ಹಿನ್ನೆಲೆಯಲ್ಲಿ ಬೆದರಿದ ಜನ

ಉಡುಪಿ: ನಗರದ ಕುಕ್ಕಿಕಟ್ಟೆ ಭಾಗ್ಯಮಂದಿರದ ಬಳಿ ಅಸ್ವಸ್ಥಗೊಂಡು ಬಿದ್ದು ಹಾರಲಾಗದೆ, ಅಸಹಾಯಕ ಸ್ಥಿತಿಯಲ್ಲಿ ಹದ್ದು ಕಂಡುಬಂದಿದ್ದು, ಹಕ್ಕಿಜ್ವರದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಈ ಬಗ್ಗೆ ಮಾಹಿತಿ ತಿಳಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಸ್ಥಳಕ್ಕೆ ಧಾವಿಸಿ, ಹಕ್ಕಿಜ್ವರ ಕಂಟ್ರೋಲ್ ರೂಂಗೆ ವಿಷಯ ತಿಳಿಸಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪಶುವೈದ್ಯ ಡಾ. ಸಂದೀಪ್ ಕುಮಾರ್ ಪರಿಸರ ಪರಿಶೀಲಿಸಿ, ಈ ಹದ್ದು ವಿದ್ಯುತ್ ತಂತಿಯ ಆಘಾತಕ್ಕೊಳಗಾಗಿ ನೆಲಕ್ಕೆ ಉರುಳಿದೆ. ಹಾರಲಾಗದೆ ಇರುವುದರಿಂದ ಆಹಾರ ಸೇವನೆಗೆ ಅವಕಾಶ ಸಿಗದೆ ನಿತ್ರಾಣಗೊಂಡು ಅಸ್ವಸ್ಥಗೊಂಡಿದೆ ಎಂದರು.

ಹದ್ದನ್ನು ಪರೀಕ್ಷಿಸಿದ ವೈದ್ಯರು, ಹಕ್ಕಿಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿ, ಜನರ ಆತಂಕಕ್ಕೆ ತೆರೆ ಎಳೆದರು. ನಂತರ ಹದ್ದಿಗೆ ಸೂಕ್ತ ಚಿಕಿತ್ಸೆ ನೀಡಿ, ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

Edited By : Manjunath H D
Kshetra Samachara

Kshetra Samachara

13/01/2021 03:48 pm

Cinque Terre

20.13 K

Cinque Terre

0