ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಕಡಲತೀರದಲ್ಲಿ ಮೂಡಿಬಂತು ಶಿವನ ಸುಂದರ ಮರಳು ಶಿಲ್ಪ

ಮಲ್ಪೆ: ಇಂದು ನಾಡಿನಾದ್ಯಂತ ಶಿವರಾತ್ರಿ ಸಂಭ್ರಮ.ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ. ಇನ್ನೊಂದೆಡೆ ಮಲ್ಪೆ ಕಡಲ ಕಿನಾರೆಯ ಮರಳಲ್ಲಿ ಶಿವ ಪ್ರತ್ಯಕ್ಷಗೊಂಡಿದ್ದಾನೆ. ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹವ್ಯಾಸಿ ಕಲಾವಿದ ವಿದ್ಯಾರ್ಥಿಗಳು ಮಹಾ ಶಿವರಾತ್ರಿಯ ಪ್ರಯುಕ್ತ "ಹರ ಹರ ಮಹಾದೇವ " ಎಂಬ ಶೀರ್ಷಿಕೆಯಡಿ ಈ ಸುಂದರ ಮರಳು ಶಿಲ್ಪ ರಚಿಸಿದ್ದಾರೆ. ಡಾ. ಜಿ. ಎಸ್. ಕೆ. ಭಟ್, ಅನೂಷ ಆಚಾರ್ಯ, ವಿಧ್ಯಾರಾಣಿ, ಸಂತೋಷ್ ಭಟ್, ಜಿ. ಯಶಾ, ಸಂದೇಶ್ ನಾಯಕ್ ಮೊದಲಾದವರು ರಚಿಸಿರುವ ಅಪೂರ್ವ ಮರಳು ಕಲಾಕೃತಿ ಇದು.4.5 ಅಡಿ ಎತ್ತರ ಮತ್ತು 12 ಅಡಿ ಅಗಲದ ಈ ಕಲಾಕೃತಿ ಶಿವರಾತ್ರಿ ದಿನವಾದ ಇಂದು ಬೀಚ್ ಗೆ ಬಂದವರ ಮನಸೂರೆಗೊಂಡಿತು. ಹಿರಿಯ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಈ ಕಲ್ಪನೆಯ ರೂವಾರಿ.

Edited By : Manjunath H D
PublicNext

PublicNext

01/03/2022 02:14 pm

Cinque Terre

49.24 K

Cinque Terre

3

ಸಂಬಂಧಿತ ಸುದ್ದಿ