ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ.
ಇಂದು ಬೆಳಿಗ್ಗಿನಿಂದ ಮಳೆ ಇನ್ನಷ್ಟು ಬಿರುಸು ಪಡೆದಿದ್ದು, ಮೋಡ ಮುಸುಕಿದ ವಾತಾವರಣ ನೆಲೆಸಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಇನ್ನೆರಡು ದಿನ ಮಳೆ ಮುಂದುವರಿಯಲಿದೆ. ಕಡಲ ತೀರ ವಾಸಿಗಳಿಗೆ ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕರಾವಳಿಯಲ್ಲಿ ದಿನವಿಡೀ ಮಳೆಯಾಗುವುದು ಕಡಿಮೆ. ಆದರೆ, ಕಳೆದೊಂದು ವಾರದಿಂದ ಒಂದೆರಡು ದಿನ ಮಳೆ ವಿರಾಮ ನೀಡಿದ್ದು, ಬಿಟ್ಟರೆ ಸತತವಾಗಿ ಮಳೆಯಾಗಿದೆ. ಜಿಲ್ಲೆಯ ಬಹುತೇಕ ನದಿಗಳು ಈಗಾಗಲೇ ತುಂಬಿ ಹರಿಯುತ್ತಿವೆ.
Kshetra Samachara
18/09/2020 11:41 am