ಬೆಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ ಬದಿಯ ಮನೆಗಳಿಗೆ ನೆರೆ ನೀರು ನುಗ್ಗಿದೆ. ಇದರಿಂದಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕಾರ್ಯಾಚರಣೆಗೆ ಇಳಿದಿದ್ದಾರೆ.
ಸಚಿವ ಆರ್.ಅಶೋಕ್ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಎರಡು ಹೆಲಿಕಾಫ್ಟರ್ ಗಳನ್ನು ರವಾನಿಸಿದ್ದಾರೆ. ಇದೀಗ 250 ಮಂದಿಯ ಎಸ್ಡಿಆರ್ಎಫ್ ತಂಡವನ್ನು ಉಡುಪಿಗೆ ಜಿಲ್ಲೆಗೆ ರವಾನೆ ಮಾಡಿದ್ದಾರೆ. ತಡರಾತ್ರಿಯೇ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಕಂದಾಯ ಸಚಿವರಿಗೆ ಮಳೆ ಅನಾಹುತ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಎರಡೂ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ಖುದ್ದು ನಿಭಾಯಿಸುವಂತೆ ಕಂದಾಯ ಕಾರ್ಯದರ್ಶಿಗೆ ಆರ್ ಅಶೋಕ್ ಸೂಚನೆ ನೀಡಿದ್ದು, ಭರದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Kshetra Samachara
20/09/2020 02:08 pm