ಉಡುಪಿ: ಎರಡು ದಿನಗಳಿಂದ ಸತತ ಮಳೆಯಾಗಿ ವ್ಯಾಪಕ ಹಾನಿಗೆ ಈಡಾಗಿದ್ದ ಕೃಷ್ಣನಗರಿಯಲ್ಲಿ ಇಂದು ಮತ್ತೆ ಜಡಿಮಳೆ ಪ್ರಾರಂಭಗೊಂಡಿದೆ.
ಭಾರೀ ನೆರೆಯ ಬಳಿಕ ನಿನ್ನೆ ರಾತ್ರಿ ಮಳೆ ಕ್ಷೀಣಿಸಿತ್ತು. ಇಂದು ಬೆಳಿಗ್ಗೆ ಸೂರ್ಯಕಿರಣ ಕಂಡ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಹನ್ನೆರಡು ಗಂಟೆ ಸುಮಾರಿಗೆ ಪ್ರಾರಂಭಗೊಂಡ ಜಡಿಮಳೆ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.
ಹಲವೆಡೆ ನಿನ್ನೆ ನೆರೆ ನೀರಿನ ಕಾರಣಕ್ಕೆ ಬೇರೆಡೆ ಆಶ್ರಯ ಪಡೆದಿದ್ದ ಜನ ಇಂದು ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಂತೆಯೇ ಇಂದು ಎರಡನೇ ಸುತ್ತಿನ ಮಳೆಯಾಗುತ್ತಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದಿತ್ತು. ಅದರಂತೆ ಜಡಿಮಳೆಯಾಗುತ್ತಿದ್ದು , ಇಳಿದ ನೆರೆ ಮತ್ತೆ ಏರತೊಡಗಿದೆ.
Kshetra Samachara
21/09/2020 10:08 pm