ವಿಶೇಷ ವರದಿ: ರಹೀಂ ಉಜಿರೆ
ಕಾರ್ಕಳ; ಶಾಲೆಗಳಲ್ಲಿ ಸುಂದರವಾದ ಹೂದೋಟ, ತರಕಾರಿ ಕೈದೋಟ ಇರೋದು ಸಾಮಾನ್ಯ. ಆದರೆ ಇಲ್ಲೊಂದು ಶಾಲೆ ಇದೆ.ಇಲ್ಲಿಯ ವಿದ್ಯಾರ್ಥಿಗಳು ಔಷಧೀಯ ಗಿಡಗಳ ಧನ್ವಂತರಿ ವನವನ್ನೇ ನಿರ್ಮಿಸಿದ್ದಾರೆ. ಶಾಲೆಯ ಆವರಣಕ್ಕೆ ಹೋದ್ರೆ ಸಾಕು , ಆಯುರ್ವೇದ ವನಕ್ಕೆ ಹೋದ ಅನುಭವ ಆಗುತ್ತದೆ.
ಕದಂಬ, ಲಕ್ಷಣ ಫಲ, ಮಾದವ ಫಲ, ಅಶೋಕ.. ಹೀಗೆ ವಿವಿಧ ಜಾತಿಯ ಸುಮಾರು 135 ಔಷಧೀಯ ಗಿಡಗಳು. ಇವುಗಳ ಅಂದ ಚಂದ ಆರೈಕೆ ನೋಡಿದ್ರೆ ಯಾವುದೋ ಆಯುರ್ವೇದ ಕಾಲೇಜಿನ ಆವರಣ ಅಂತ ಅಂದುಕೊಳ್ಳಬಹುದು... ಆದ್ರೆ ಇದು ಕಾಲೇಜ್ ಆಲ್ಲ ,ಸರ್ಕಾರಿ ಶಾಲೆ! ಉಡುಪಿ ಜಿಲ್ಲೆಯ ಕಾರ್ಕಳದ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾಣಿಸುವ ಧನ್ವಂತರಿ ವನದ ದೃಶ್ಯ ಇದು.ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು, ಔಷಧೀಯ ಗಿಡಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಧನ್ವಂತರಿ ಆರೋಗ್ಯ ವನ ಹೆಸರಿನ ಔಷಧಿ ಗಿಡಗಳ ತೋಟವನ್ನು ನಿರ್ಮಿಸಿದ್ದಾರೆ.
ನಾಡಿನ ವಿವಿಧ ಭಾಗಗಳಿಂದ ತಂದು ನೆಟ್ಟಿರುವ ಔಷಧದ ಗಿಡಗಳ ಲಾಲಾನೆ ಪಾಲನೆ ಮಾಡೋದು ಇದೇ ಶಾಲೆಯ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಇಲ್ಲಿನ ಔಷಧಿ ಗಿಡಗಳನ್ನು ಗುರುತಿಸುವುದರ ಜೊತೆಗೆ, ಅವುಗಳ ಉಪಯೋಗಗಳನ್ನೂ ತಿಳಿದುಕೊಂಡಿದ್ದಾರೆ..
ಒಟ್ಟಾರೆ ವಿದ್ಯಾರ್ಥಿಗಳಿಗೆ ಆಯುರ್ವೇದದ ಔಷಧಿ ಗಿಡಗಳ ಬಗ್ಗೆ ಬಾಲ್ಯದಲ್ಲೇ ಅರಿವು ಮೂಡಿಸುವ ಶಿಕ್ಷಕರ ಹೊಸ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
PublicNext
20/01/2022 06:02 pm