ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಸಮೀಪದ ತಾಳಿಪಾಡಿಯಲ್ಲಿ ತಡೆಗೋಡೆ ಕಾಮಗಾರಿ ಗುತ್ತಿಗೆ ವಹಿಸಿದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮನೆಯೊಂದು ಕುಸಿದು ಬೀಳುವ ಭೀತಿಯಲ್ಲಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆಯ ಇಕ್ಕೆಲಗಳಿಂದ ಮಣ್ಣು ಸೇರಿದಂತೆ ನೀರು ರಭಸವಾಗಿ ಹರಿದು ಬರುತ್ತಿದ್ದು, ಸ್ಥಳೀಯ ನಿವಾಸಿ ಗೋಪಾಲ ಬೆಳ್ಚಾಡ ಎಂಬವರ ಮನೆಗೆ ಹಾನಿಯಾಗಿದೆ. ಮಾತ್ರವಲ್ಲ, ಮನೆಯ ಗೋಡೆ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಮನೆಯಲ್ಲಿ ಓರ್ವ ವೃದ್ಧ, ಮಗು ಸೇರಿದಂತೆ ನಾಲ್ವರು ವಾಸಿಸುತ್ತಿದ್ದು, ಆತಂಕದಿಂದ ದಿನದೂಡುವಂತಾಗಿದೆ.
ಸಂಭಂದಿಸಿದ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದರೂ, ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Kshetra Samachara
21/09/2020 01:30 pm