ಕಾಪು: ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಪು ತಾಲೂಕಿನ ಪಾಂಗಾಳ, ಮಜೂರು, ಉಳಿಯಾರು,ಕರಂದಾಡಿ,ಕಲ್ಯಾಲು ಸೇರಿದಂತೆ ಅನೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು ಪರಿಸರದ ಹಲವಾರು ಮನೆಗಳು ಜಲಾವೃತಗೊಂಡು ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಕೆಲವೆಡೆ ಸಂಪರ್ಕ ಕಡಿತದ ಭೀತಿ ಎದುರಾಗಿದ್ದು,ಸ್ಥಳೀಯರ ಸಹಕಾರದಿಂದ ಮನೆ ಸ್ಥಳಾಂತರಗೊಳಿಸುವ ಕಾರ್ಯಾಚರಣೆ ನಡೆಯುತ್ತಿವೆ.
ಪ್ರತೀ ಮಳೆಗಾಲದಲ್ಲೂ ನೆರೆ ಬಂದಾಗ ರಸ್ತೆಯಲ್ಲೇ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಾರಿ ಸಮಸ್ಯೆಗೊಳಗಾಗುತ್ತಾರೆ. ವಾಹನ ಸಂಚಾರಕ್ಕೆ ತೊಡಕು ಉಂಟಾಗುವುದರಿಂದ ಜನ ಪರದಾಡುವಂತಾಗುತ್ತವೆ.
Kshetra Samachara
20/09/2020 01:43 pm