ಮಣಿಪಾಲ: ರಜತಾದ್ರಿ ಕಚೇರಿ ಸಂಕೀರ್ಣದ ಸನಿಹದಲ್ಲಿ ಅಪಘಾತಕ್ಕೆ ತುತ್ತಾಗಿದ್ದ ಗಾಯಾಳು ಗೋವಿನ ರಕ್ಷಣಾ ಕಾರ್ಯಾಚರಣೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಮಾಂಡವಿ ರಿಕ್ಷಾ ನಿಲ್ದಾಣದ ಚಾಲಕರಿಂದ ನಡೆಯಿತು. ವಾರೀಸುದಾರರು ಇಲ್ಲದ ದನ ಗರ್ಭ ಧರಿಸಿದ್ದು, ಅಪಘಾತದ ಗಾಯದಿಂದಾಗಿ ಮಲಗಿದ್ದಲ್ಲಿಯೇ ಅಸಹಾಯಕವಾಗಿ ದಿನ ಕಳೆಯುತ್ತಿತ್ತು! ಈ ಸಂದರ್ಭ ಸರಳಬೆಟ್ಟು ಹೊಸ ಬೆಳಕು ಆಶ್ರಮವು ಗೋವಿಗೆ ಆಶ್ರಯ ಒದಗಿಸಿ ಗೋ ಪ್ರೇಮ ಮೆರೆದಿದೆ.
ಕಾರ್ಯಾಚರಣೆಯಲ್ಲಿ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಸಂದೀಪ್, ಪ್ರದೀಪ್ ಹಾಗೂ ರಿಕ್ಷಾ ಚಾಲಕರು ಭಾಗಿಯಾಗಿದ್ದರು. ಖರ್ಚು ವೆಚ್ಚವನ್ನು ಸುಶೀಲಾ ರಾವ್ ನೀಡಿ ಸಹಕರಿಸಿದರು.
Kshetra Samachara
21/12/2020 07:18 pm