ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಕರಾವಳಿಯಾದ್ಯಂತ ಧಾರಾಕಾರ ಮಳೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಾಗುತ್ತಿರುವ ಹವಾಮಾನದ ವೈಪರೀತ್ಯಯದಿಂದಾಗಿ ಕರಾವಳಿಯಾದ್ಯಂತ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ.

ಜಿಲ್ಲೆಯ ಮಂಗಳೂರು ತಾಲೂಕು, ಬೆಳ್ತಂಗಡಿ ತಾಲೂಕು, ಕಡಬ ತಾಲೂಕು, ಸುಳ್ಯ ತಾಲೂಕು, ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ.

ಜಿಲ್ಲೆಯ ಕನಕಮಜಲಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು 37 ಮಿ.ಮೀ. ಮಳೆಯಾಗಿದೆ. ಉಳಿದಂತೆ ಅರಿಯಡ್ಕ 23 ಮಿ.ಮೀ. ಆರ್ಯಾಪು 17.5 ಮಿ.ಮೀ, ನರಿಮೊಗರಿ 16.5 ಮಿ.ಮೀ, ಸುಳ್ಯ ನಗರ 15 ಮಿ.ಮೀ., ಕಾಣಿಯೂರು 14, ಬಳ್ನಾಡು 12, ಮರ್ಕಂಜ, ಕಲ್ಮಡ್ಕ ದಲ್ಲಿ 11 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ‌ ತಿಳಿಸಿದೆ.

Edited By : Manjunath H D
Kshetra Samachara

Kshetra Samachara

09/12/2020 09:52 am

Cinque Terre

44.98 K

Cinque Terre

0