ಕಾಪು: ಐಸಿಇಸಿ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ , ಕುಂಠಿತವಾಗಿರುವ ಕೃಷಿ, ತೋಟಗಾರಿಕೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳನ್ನು ತಂಡ ಪರಿಶೀಲಿಸಿತು.
ಯುಪಿಸಿಎಲ್ ನಿಂದ ಉಂಟಾಗಿರುವ ಪರಿಸರ, ನೀರಿನ ಸಮಸ್ಯೆ, ಆರೋಗ್ಯದ ಸಮಸ್ಯೆಗಳನ್ನು ಪರಿಶೀಲಿಸಿ ಕೇಂದ್ರೀಯ ಹಸಿರು ಪೀಠಕ್ಕೆ ಈ ತಂಡ ಜನವರಿ ಅಂತ್ಯದೊಳಗೆ ವರದಿ ನೀಡಬೇಕಿದ್ದು, ಸಮಸ್ಯೆಯ ಆಳವನ್ನು ಅರಿತ ತಜ್ಞರ ತಂಡ ದಿನದ ವಿಸ್ತರಣೆಯಾಗಿದೆ ಎಂದು ತಜ್ಞರ ತಂಡದ ಡಾ.ಕೃಷ್ಣರಾಜ್ ಅಭಿಪ್ರಾಯಿಸಿದ್ದಾರೆ.
ಕೇಂದ್ರೀಯ ಹಸಿರು ನ್ಯಾಯ ಪೀಠದಲ್ಲಿ ನಂದಿಕೂರು ಜನಜಾಗೃತಿ ಸಮಿತಿ 2018 ರಲ್ಲಿ ಹೂಡಿದ್ದ ದಾವೆಯ ತೀರ್ಪು ಸಮಿತಿ ಪರವಾಗಿದ್ದು,ಆ ಕುರಿತಾಗಿ ಸಮಿತಿ ಬೇಡಿಕೆ ಇರಿಸಿದ್ದ 130 ಕೋಟಿ ರೂ. ಪರಿಹಾರ ಕುರಿತಾಗಿ ಈ ತಜ್ಞರ ತಂಡವು ಹಸಿರು ಪೀಠದ ಅದೇಶದಂತೆ ಯೋಜನಾ ಸಂತ್ರಸ್ತರ ಅಹವಾಲು ಆಲಿಸಲು ಅಲ್ಲಿಗೆ ತೆರಳಿದ್ದು, ಜಗನ್ನಾಥನ್ ಮೂಲ್ಯ ಹಾಗೂ ಜಯಂತ್ ಭಟ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಕೃಷಿ, ತೋಟಗಾರಿಕೆ, ಆರೋಗ್ಯ , ಪರಿಸರ ಇಲಾಖೆ ಯ ಅಧಿಕಾರಿಗಳು ಜೊತೆಗಿದ್ದರು.
Kshetra Samachara
08/12/2020 04:08 pm