ಮಂಗಳೂರು : ಸಾಮಾನ್ಯವಾಗಿ ಅಬ್ಬರಿಸಿ ಬರುವ ಅಲೆಗಳನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ ಇದರ ಮಧ್ಯೆ ಕರಾವಳಿಯ ಹಲವು ಕಡಲತೀರಗಳಲ್ಲಿ ಸಮುದ್ರ ನೀರು ರಾತ್ರಿ ನೀಲಿಯಾಗಿ ಕಾಣಿಸಿಕೊಳ್ಳತೊಡಗಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.
ರಾತ್ರಿ ಕಡಲು ನೋಡಲೆಂದು ಹೋದವರು ತಮಗೆ ಸಿಗುವ ನೀಲಿ ಬಣ್ಣದ ನೀರಿನ ಫೊಟೊಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.
ಇದು ಸಮುದ್ರ ನೀರಿನಲ್ಲಿ ಉಂಟಾಗುವ ಬಯೋಲುಮಿನಸೆನ್ಸ್ ಪ್ರಕ್ರಿಯೆ(ಜೈವ ದೀಪ್ತಿ)ಯಿಂದಾಗಿ ಕಾಣಿಸಿಕೊಳ್ಳುತ್ತದೆ.
ಸಮುದ್ರ ನೀರಿನಲ್ಲಿರುವ ಡೈನೊಫ್ಲೆಗಲೆಟ್ ಎನ್ನುವ ಪಾಚಿಯಂತಹ ಜೀವಿಗಳ ದೇಹದಲ್ಲಿರುವ ರಾಸಾಯನಿಕದಿಂದಾಗಿ ಈ ರೀತಿಯ ನೀಲಿ ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಅಮಾವಾಸ್ಯೆಯ ರಾತ್ರಿಯಲ್ಲಿ ಇದು ಹೆಚ್ಚು ಕಾಣುತ್ತದೆ. ಹೆಚ್ಚು ಬೆಳಕು ಇರುವ ಬೀಚ್ಗಳಲ್ಲಿ ಗೋಚರಿಸದು, ಬದಲು ದಟ್ಟ ಕತ್ತಲೆ ಇರುವಲ್ಲಿ ಕಾಣಿಸುತ್ತದೆ.
ಇದು ಪ್ರತಿವರ್ಷವೂ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ ಎಂದು ಮೀನುಗಾರರು ಹೇಳಿದ್ದಾರೆ.
Kshetra Samachara
23/11/2020 03:11 pm