ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದಾರಿ ತಪ್ಪಿ ಬಂದ ಅಜ್ಜಿ; ಸುರಕ್ಷಿತವಾಗಿ ಮನೆ ತಲುಪಿಸಿದ ಸಮಾಜಸೇವಕರು

ಉಡುಪಿ: ಸುಬ್ರಹ್ಮಣ್ಯ ನಗರದಲ್ಲಿ ದಿಕ್ಕು ತಪ್ಪಿ ಬಂದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಸಮಾಜಸೇವಕರು ರಕ್ಷಿಸಿ ದೊಡ್ಡಣಗುಡ್ಡೆಯ ಮನೆಗೆ ಸೇರಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ವೃದ್ಧೆ ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ಮನೆಯಿಂದ ಬೆಳಗ್ಗೆ ಹೊರಗೆ ತೆರಳಿದ್ದ ವೃದ್ಧೆ, ಮರಳಿ ಮನೆಗೆ ಸೇರಲು ದಾರಿ ಕಾಣದೆ ರಾತ್ರಿವರೆಗೂ ಅಲೆದಾಟ ನಡೆಸಿದ್ದಾರೆ. ಕೊನೆಗೂ ಅವರು ಸುಬ್ರಹ್ಮಣ್ಯ ನಗರದಲ್ಲಿ ಕಂಡು ಬಂದಾಗ ಸ್ಥಳೀಯರು ಹಸಿದಿದ್ದ ವೃದ್ಧೆಯನ್ನು ಉಪಚರಿಸಿದ್ದಾರೆ. ನಂತರ ನಗರಸಭೆ ಸದಸ್ಯೆ ಜಯಂತಿ ಪೂಜಾರಿ ಅವರು ನಾಗರಿಕ ಸಮಿತಿಯ ಸಹಾಯವಾಣಿಗೆ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ನಗರಠಾಣೆ ಎಎಸ್ಐ ವಿಜಯ್ ಸಿ. ಅವರು ವೃದ್ಧೆಯ ವಿಳಾಸವನ್ನು ಪತ್ತೆ ಮಾಡಿ ವೃದ್ಧೆಯನ್ನು ಮನೆಗೆ ತಲುಪಿಸಿದರು.

Edited By : Nagesh Gaonkar
Kshetra Samachara

Kshetra Samachara

21/11/2020 11:27 am

Cinque Terre

21.41 K

Cinque Terre

4

ಸಂಬಂಧಿತ ಸುದ್ದಿ