ಮುಲ್ಕಿ: ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹೆಚ್ಚಿನ ಗದ್ದೆಗಳಲ್ಲಿ ಕಟಾವು ಕಾರ್ಯ ನಡೆಯುತ್ತಿದ್ದು, ಕೆಲ ದಿನಗಳಿಂದ ಸಂಜೆಯಾಗುತ್ತಲೇ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ.
ಮುಲ್ಕಿಯ ಪ್ರಧಾನ ಕೃಷಿ ಬೆಳೆಯುವ ಪ್ರದೇಶವಾದ ಮಟ್ಟುವಿನಲ್ಲಿ ಕಟಾವು ಮಾಡಿದ ಭತ್ತದ ಪೈರು ಮಳೆಯಿಂದ ಮುಳುಗಡೆಯಾಗಿದೆ.
ನೀರಿನ ಮಧ್ಯೆ ಭತ್ತದ ಪೈರನ್ನು ಹೊತ್ತು ತರಲಾಗುತ್ತಿದ್ದು, ಗದ್ದೆಯಲ್ಲಿದ್ದ ಬೈಹುಲ್ಲು ಕೂಡ ಮಳೆಗೆ ಒದ್ದೆಯಾಗಿ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿಕರ ಪರಿಸ್ಥಿತಿ ಮನಗಂಡು ಸರಕಾರ, ಶೀಘ್ರ ನಷ್ಟ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Kshetra Samachara
17/11/2021 12:40 pm