ಮೂಡುಬಿದಿರೆ: ಮಾಂಟ್ರಾಡಿ ಅರಮನೆಯ 20 ಎಕರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತವನ್ನು ಬೆಳೆದು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಜೋರುಗಾಳಿ- ಬಿರುಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತು ಭತ್ತವೆಲ್ಲ ಕೊಳೆತು ನಾಶವಾಗಿರುವುದರಿಂದ ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಮಾಂಟ್ರಾಡಿ ಅರಮನೆಬೈಲು ಪ್ರದೇಶದ ರೈತರು ಕಂಗಾಲಾಗಿದ್ದಾರೆ.
ಸ್ಥಳೀಯ 6 ಮಂದಿ ಸೇರಿಕೊಂಡು ಅರಮನೆಗೆ ಸಂಬಂಧಿಸಿದ 20 ಎಕರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತದ ಕೃಷಿ ಮಾಡಿದ್ದರು. ಮೂರು, ನಾಲ್ಕು ದಿನಗಳ ಹಿಂದೆ ಮಾಂಟ್ರಾಡಿ ಪ್ರದೇಶದಲ್ಲಿ ಭಾರಿ ಮಳೆ ಸುರಿದ ಪರಿಣಾಮ 14 ಗದ್ದೆಗಳಲ್ಲಿ ಬೆಳೆದ 200 ಕ್ವಿಂಟಾಲ್‌ನಷ್ಟು ಭತ್ತದ ಪೈರು ನೀರಿನಲ್ಲಿ ಮುಳುಗಿ ಗದ್ದೆಯ ಮಣ್ಣಿಗೆ ಅಂಟಿಕೊಂಡು ಕೊಳೆತು ಹೋಗಿದೆ. ಅತ್ತ ಯಂತ್ರದ ಮೂಲಕ ಇತ್ತ ಕೂಲಿಯಾಳು ಮೂಲಕವೂ ಕಟಾವು ಮಾಡಲಾಗದ ಅತಂತ್ರ ಸ್ಥಿತಿಯಲ್ಲಿದೆ.
ಕೃಷಿಕರಾದ ಪ್ರಸನ್ನ ಬಲ್ಲಾಳ್, ಧರ್ಮಣ ಆಚಾರಿ, ಪೂವಪ್ಪ ಪೂಜಾರಿ, ನೀಲೇಶ ಪೂಜಾರಿ, ಭಾಸ್ಕರ್ ಆಚಾರಿ ಮತ್ತು ಸುಂದರ ಪೂಜಾರಿ ಅವರು ಒಂದೊಂದು ಗದ್ದೆಗೆ ಸಾವಿರಾರು ರೂ. ಖರ್ಚು ಮಾಡಿ ಭತ್ತ ಕೃಷಿ ಮಾಡಿದ್ದು ಇದೀಗ ಮಳೆ ಅವಾಂತರದಿಂದಾಗಿ ಬೆಳೆದ ಭತ್ತ ನಾಶವಾಗಿರುವುದರಿಂದ ಮತ್ತೆ ಅದೇ ಗದ್ದೆಗೆ ಯಂತ್ರವನ್ನು ಬಳಸಿ ಉಳುಮೆ ಮಾಡಲು ಹೊರಟಿದ್ದರು. ಆದರೆ, ಭಾರಿ ಮಳೆಯಿಂದಾಗಿ ನಷ್ಟ ಅನುಭವಿಸುವಂತಾಗಿದೆ.
Kshetra Samachara
04/11/2021 05:07 pm