ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬೋಟು ಮುಳುಗಡೆ; 7 ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ದುರ್ಗಾ ವೈಷ್ಣವಿ ಎಂಬ ಹೆಸರಿನ ಆಳಸಮುದ್ರ ಬೋಟೊಂದು ಮುಳುಗಿದ್ದು, ಅದರಲ್ಲಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.

ಲತೀಶ್ ಮೆಂಡನ್ ಅವರಿಗೆ ಸೇರಿದ ಶ್ರೀ ದುರ್ಗಾ ವೈಷ್ಣವಿ ಬೋಟು ಆ. 29ರಂದು ರಾತ್ರಿ ಮಲ್ಪೆ ಬಂದರಿನಿಂದ ಹೊರಟಿತ್ತು. ಮೀನುಗಾರಿಕೆ ಮುಗಿಸಿ ವಾಪಸು ಬರುವಾಗ ಸೆ. 8ರಂದು ಬೆಳಗ್ಗೆ ಗಂಗೊಳ್ಳಿ ತೀರದಿಂದ ಸುಮಾರು 15 ಮಾರು ಆಳ ದೂರ ಬೋಟಿನ ಕೆಳಭಾಗಕ್ಕೆ ಗಟ್ಟಿಯಾದ ವಸ್ತು ತಾಗಿದಂತಾಯಿತು. ಪರಿಣಾಮ ಬೋಟಿನೊಳಗೆ ನೀರು ಬರಲಾರಂಭಿಸಿತು. ಬೋಟಿನಲ್ಲಿದ್ದ ಕಾರ್ಮಿಕರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ನೀರಿನ ಒಳ ಹರಿವು ಹೆಚ್ಚಾಗಿ ಬೋಟ್‌ನ ಎಂಜಿನ್ ಕೆಟ್ಟು ಹೋಗಿ ಬೋಟು ಮುಳುಗಡೆಗೊಂಡಿತು. ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ವರ್ಣಮಂಗಳ, ಸಮೃದ್ಧಿ, ಸಮುದ್ರತನಯ ಬೋಟ್‌ನವರು ತತ್‌ಕ್ಷಣ ಧಾವಿಸಿ ಬಂದು ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.ಮೂರು ಬೋಟ್‌ನ ಸಹಾಯದಿಂದ ಎಳೆದು ತರುವಾಗ ಸಂಜೆ ಹಂಗಾರಕಟ್ಟೆ ಬೆಂಗ್ರೆ ಸಮೀಪ ಬೋಟು ಸಂಪೂರ್ಣ ಮುಳುಗಡೆಗೊಂಡಿತ್ತು.ಹಿಡಿದ ಮೀನು, ಬಲೆ, ಎಂಜಿನ್ ಸಹಿತ ಸುಮಾರು 50 ಲಕ್ಷ ರೂ.ನಷ್ಟ ಉಂಟಾಗಿದೆ ಎನ್ನಲಾಗಿದೆ.

Edited By : Vijay Kumar
Kshetra Samachara

Kshetra Samachara

10/09/2022 06:20 pm

Cinque Terre

5.82 K

Cinque Terre

0