ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಹತ್ತು ಜನರಿದ್ದರು ಎನ್ನಲಾಗಿದೆ.
ಹತ್ತು ಜನ ಮೀನುಗಾರರು ಈಜಿ ಮತ್ತೊಂದು ಬೋಟ್ ಹತ್ತಿ ಪಾರಾಗಿದ್ದಾರೆ. ಮಂಗಳೂರಿನ ಬಂದರಿನಿಂದ ಹೊರಟಿದ್ದ ಜೈ ಶ್ರೀರಾಮ್ ಹೆಸರಿನ ಬೋಟ್ ನೋಡನೋಡುತ್ತಲೇ ಸಂಪೂರ್ಣ ಮುಳುಗಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆ ಈ ದುರಂತ ಸಂಭವಿಸಿದೆ. ಮಂಗಳೂರಿನಿಂದ 30 ನಾಟಿಕಲ್ ದೂರದಲ್ಲಿ ಘಟನೆ ನಡೆದಿದೆ. ಇಂದು ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಬೋಟ್‌ಗಳು ವಾಪಾಸಾಗಿಲ್ಲ ಸಮುದ್ರದ ಅಲೆಗಳು ಹೆಚ್ಚಾದ ಹಿನ್ನೆಲೆ ಬಂದರಿಗೆ ಬೋಟ್‌ಗಳು ಹಿಂತಿರುಗಿಲ್ಲ.
PublicNext
07/08/2022 05:36 pm