ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಕಾರು ಪತ್ತೆ! ನಾಪತ್ತೆಯಾದವರಿಗಾಗಿ ಹುಡುಕಾಟ

ಕಡಬ: ಸೇತುವೆಗೆ ಡಿಕ್ಕಿ ಹೊಡೆದು ಕಾರೊಂದು ನೀರಿಗೆ ಬಿದ್ದಿದೆ. ಸದ್ಯ ಅಗ್ನಿಶಾಮಕ ದಳದಿಂದ ಕಾರು ಶೋಧ ಕಾರ್ಯಾಚರಣೆ ಮುಂದುವರಿದೆ. ಸ್ಥಳೀಯ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಯುತ್ತಿದೆ. ಅಗ್ನಿಶಾಮಕ ತಂಡ ಹಾಗೂ ಸ್ಥಳೀಯರ ಸಹಾಯದಿಂದ ನೀರಿನೊಳಗೆ ಕಾಣಿಸಿಕೊಂಡ ಕಾರು ಹಗ್ಗ ಹಾಕಿ ಮೇಲಕ್ಕೆತ್ತಲಾಯಿತು.

ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದು ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ರು. ಜೀವ ಪಣಕ್ಕಿಟ್ಟು ಕಾರು ಪತ್ತೆ ಕಾರ್ಯಾಚರಣೆಗೆ ಇಳಿದ ಸ್ಥಳೀಯ ಜೊತೆಗೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನೂ ಲೆಕ್ಕಿಸದೇ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

ಇನ್ನು ಭಾರೀ ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಸತತ ಪ್ರಯತ್ನದ ನಂತರ ಕೊನೆಗೂ ಕಾರು ಮೇಲಕ್ಕೆತ್ತಲಾಗಿದೆ. ಕೇವಲ ಹಗ್ಗ ಮತ್ತು ರಬ್ಬರ್ ಬೋಟ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ.

ಇನ್ನು ಕಾರಿನಲ್ಲಿದ್ದವರು ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದೆ.

Edited By : Shivu K
Kshetra Samachara

Kshetra Samachara

10/07/2022 02:42 pm

Cinque Terre

13.91 K

Cinque Terre

0

ಸಂಬಂಧಿತ ಸುದ್ದಿ