ತೆಕ್ಕಟ್ಟೆ: ನಿನ್ನೆ ಸುರಿದ ಮಳೆಗೆ ಕುಂಭಾಶಿ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದ ಗಣೇಶ್ ಕೊರಗ ಅವರ ಮನೆಯ ಮೇಲ್ಪಾವಣಿ ಕುಸಿದುಬಿದ್ದಿದೆ. ಕೋಣೆಯಲ್ಲಿ ಮಲಗಿದ್ದ ಗಣೇಶ್ ಕೊರಗ ಅವರ ಮೈಮೇಲೆ ಮರದ ಪಕ್ಕಾಸು ಹಾಗೂ ಹೆಂಚುಗಳು ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಘಟನೆಯಿಂದ ಸುಮಾರು 3 ಲಕ್ಷರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕುಂಭಾಶಿ ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಎಸ್.ಆರ್., ಪಿಡಿಒ ಜಯರಾಮ ಶೆಟ್ಟಿ, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ವಿ., ಗ್ರಾ.ಪಂ. ಸದಸ್ಯರಾದ ಸುನಿಲ್, ಗ್ರಾಮಕರಣಿಕ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
10/06/2022 12:13 pm