ಬಂಟ್ವಾಳ: ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಪಾಂಡವರಕಲ್ಲು ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ.
ಪಾಂಡವರಕಲ್ಲು ನಿವಾಸಿ ಲೋಕೇಶ್ ಮೃತಪಟ್ಟ ವ್ಯಕ್ತಿ. ಕೂಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಇಂದು ರಜೆಯಲ್ಲಿದ್ದರು.
ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದ ವೇಳೆ ಸುಮಾರು ಮೂರು ಗಂಟೆಯ ವೇಳೆ ಬಡಿದ ಸಿಡಲಿನ ಆಘಾತ ಕ್ಕೆ ಇವರು ಮೃತಪಟ್ಟಿರುವುದಾಗಿ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/04/2022 11:01 pm