ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಪಂಚಾಯತ್ ಕಚೇರಿ ಬಳಿ ಅಗ್ನಿ ಜ್ವಾಲೆ; ಸ್ಥಳೀಯರ ನೆರವು, ಆತಂಕ ದೂರ

ಮುಲ್ಕಿ: ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಪಂಚಾಯತ್ ಕಚೇರಿ ಬಳಿಯ ಖಾಸಗಿ ಜಾಗಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಸ್ಥಳೀಯರು ಕೆಲಹೊತ್ತು ಆತಂಕಕ್ಕೀಡಾದರು.

ಪಂಚಾಯತ್ ಕಚೇರಿ ಸಮೀಪದ ವಿದ್ಯುತ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ ನಿಂದಾಗಿ ಬೆಂಕಿ ತಗುಲಿದ್ದು, ಲಿಂಗಪ್ಪಯ್ಯಕಾಡು ಕ್ರಾಸ್ ಬಳಿಯ ವ್ಯಕ್ತಿಯೊಬ್ಬರ ಪಾಳು ಬಿದ್ದ ಜಾಗದಲ್ಲಿ ಬೆಂಕಿ ಹರಡಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಆಳ್ವ, ಮೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಮುಲ್ಕಿ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

10/03/2022 04:26 pm

Cinque Terre

20.25 K

Cinque Terre

0

ಸಂಬಂಧಿತ ಸುದ್ದಿ