ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ವಾಯುಭಾರ ಕುಸಿತ ಪರಿಣಾಮ ದೋಣಿ ಮಗುಚಿ ಬಿದ್ದು ದುರ್ಘಟನೆ ಸಂಭವಿಸಿದೆ.

ವರದಿ :ದಾಮೋದರ ಮೊಗವೀರ ನಾಯಿಕವಾಡಿ .

ಬೈಂದೂರು :ಭಾರೀ ಗಾಳಿ ಮಳೆ ವಾಯುಭಾರ ಕುಸಿತ ಸಂಭವಿಸಿದ ಕಾರಣ ಇಂದು ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ನಾಡ ದೋಣಿಯೊಂದು ಮಗುಚಿ ಬಿದ್ದ ದುರ್ಘಟನೆ ತ್ರಾಸಿ ಕಂಚುಗೋಡು ಸಮೀಪದ ಕಡಲಿನಲ್ಲಿ ಸಂಭವಿಸಿದೆ .ಹಾಗೂ ದೋಣಿಯಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ .

ಕುಂದಾಪುರ ತಾಲ್ಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65) ನಾಗರಾಜ ಯಾನೆ ರಾಜ ಖಾರ್ವಿ (38) ವಿನಯ್ ಖಾರ್ವಿ (30) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ .

ಹೌದು ರಾಮ ಖಾರ್ವಿ ಯವರ ಓಂಕಾರ್ ಪ್ರಸನ್ನ ಎಂಬ ದೋಣಿಯಲ್ಲಿ ಇಂದು ಮುಂಜಾನೆ ಮೂವರು ಮೀನುಗಾರಿಕೆಗೆ ತೆರಳಿದ್ದು ಬೆಳಿಗ್ಗೆ ಸರಿಸುಮಾರು 8ಗಂಟೆಗೆ ಭಾರೀ ಗಾಳಿ ಮಳೆ ಮತ್ತು ಸಮುದ್ರದ ಅಲೆಗಳ ಹೊಡೆತದಿಂದ ದೋಣಿಯು ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿ ಬಿದ್ದಿದೆ . ದೋಣಿ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ದೋಣಿಗಳಲ್ಲಿ ದ್ದವರು ರಕ್ಷಿಸಿ ದಡ ಸೇರಿಸಿದ್ದಾರೆ .

ದೋಣಿಯಲ್ಲಿದ್ದ ಇಂಜಿನ್ .ಬಲೆ .ಹಾಗೂ ಇನ್ನಿತರ ವಸ್ತುಗಳು ಮುಳುಗಿ ಹಾನಿಯಾಗಿದ್ದು ಭಾಗಶಃ ನಷ್ಟವಾಗಿದೆ ಎಂದು ವಿನಯ್ ಖಾರ್ವಿ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ .

Edited By : Manjunath H D
Kshetra Samachara

Kshetra Samachara

05/09/2021 10:23 pm

Cinque Terre

24.71 K

Cinque Terre

1

ಸಂಬಂಧಿತ ಸುದ್ದಿ