ಮರ್ಣೆ: ಉಡುಪಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹತ್ತಾರು ಮನೆಗಳು ಹಾನಿಗೀಡಾಗಿವೆ. ಸ್ವರ್ಣ ನದಿ ತೀರದಲ್ಲಿ ಅತಿ ಹೆಚ್ಚು ಅವಘಡಗಳು ಸಂಭವಿಸಿವೆ.
ಉಡುಪಿ ತಾಲೂಕು ಮರ್ಣೆ ಗ್ರಾಮದ ಬಸವ ಮೂಲ್ಯ ಎಂಬವರ ಮನೆ ಮತ್ತು ಕೊಟ್ಟಿಗೆ ಮಳೆ ನೀರಿಗೆ ಸಂಪೂರ್ಣ ಮುಳುಗಡೆಯಾಗಿತ್ತು.
ನೆರೆಯ ಪ್ರಮಾಣ ಇಳಿಕೆಯಾಗಿ ಕೆಲವೇ ಗಂಟೆಗಳಲ್ಲಿ ಬಸವ ಮೂಲ್ಯರ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿದೆ.
ಕೊಟ್ಟಿಗೆಯಲ್ಲಿದ್ದ ದನಗಳನ್ನು ಮಳೆಗೂ ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಕೊಟ್ಟಿಗೆ ಬೀಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಲ್ಲಿ ಸೆರೆ ಹಿಡಿದಿದ್ದಾರೆ.
ಉಡುಪಿ ಜಿಲ್ಲಾಡಳಿತ ಕೊಟ್ಟ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ 67ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಗೀಡಾಗಿದೆ.
Kshetra Samachara
22/09/2020 12:24 pm