ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಕಾಡಿನಿಂದ ತೋಟಕ್ಕೆ ನುಗ್ಗಿದ್ದ ಆನೆ ಹಿಂಡೊಂದರಲ್ಲಿದ್ದ ಮರಿಯಾನೆ ಹಿಂದೆ ಹೋಗಲಾಗದೆ ತೋಟದಲ್ಲಿಯೇ ಉಳಿದ ಘಟನೆ ನಡೆದಿದೆ.
ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿ ಬೆಳೆಯನ್ನು ತಿಂದು ಸಂಪೂರ್ಣ ನಾಶ ಮಾಡಿತ್ತು. ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಬಾಕಿಯಾಗಿದೆ.
ಬೆಳಗ್ಗೆ ತೋಟದ ಮಾಲೀಕರು ಹೋದಾಗ ವಿಷಯ ಗೊತ್ತಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ತಿಳಿದು ಜನರು ಮರಿಯಾನೆಯನ್ನು ನೋಡಲು ಬರುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಧಾವಿಸಿದ್ದಾರೆ.
Kshetra Samachara
30/10/2020 11:33 am