ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ ಬೀಚ್ ಗೆ ಬ್ಲೂ ಫ್ಲ್ಯಾಗ್ ಮಾನ್ಯತೆ: ಬ್ಲೂ ಫ್ಯಾಗ್ ಮಾನದಂಡಗಳೇನು ಗೊತ್ತೆ?

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಹಿತ ಭಾರತದ ಎಂಟು ಕಡಲ ತೀರಗಳಿಗೆ ಡೆನ್ಮಾರ್ಕ್ ನ ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿಯಿಂದ ಅಧಿಕೃತವಾಗಿ ಬ್ಲೂ ಫ್ಲ್ಯಾಗ್ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ.

ಗುಜರಾತ್‍ನ ಶಿವರಾಜಪುರ, ದಿಯು ಮತ್ತು ದಾಮನ್‍ನ ಘೋಗ್ಲಾ, ಕೇರಳದ ಕಪ್ಪದ್, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ್ ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರಿ, ಆಂಧ್ರಪ್ರದೇಶದ ರುಶಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ನ ರಾಧಾನಗರ್ ಬೀಚ್‍ಗಳು ಇತರ ಮಾನ್ಯತೆ ಪಡೆದ ಬೀಚ್‍ಗಳು.

ಕಾಮಿನಿ ನದಿ ಸಮುದ್ರ ಸೇರುವ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್ ನ್ನು ಬ್ಲೂ ಪ್ಲ್ಯಾಗ್ ಸರ್ಟಿಫಿಕೇಶನ್ ಎಂದು ಪರಿಗಣಿಸಲು ಕೇಂದ್ರ ಪರಿಸರ ಮಂತ್ರಾಲಯ ಎರಡು ವರ್ಷಗಳ ಹಿಂದೆಯೇ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರದ 8 ಕೋಟಿ ರೂ. ಅನುದಾನದಲ್ಲಿ ಗುರ್‍ಗಾಂವ್‍ನ ಎ ಟು ಝಡ್ ಇನ್‍ಪ್ರಾ ಸರ್ವಿಸಸ್ ಲಿ. ಸಂಸ್ಥೆ ಅಂತಾರಾಷ್ಟ್ರೀಯ ಮಾನ್ಯತೆಗೆ ಅನುಗುಣವಾಗಿ ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ನಾಲ್ಕು ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಯೋಜನೆ ಕಾರ್ಯರೂಪಗೊಳಿಸಿತ್ತು.

ಅಲ್ಲದೆ, ರಾಜ್ಯ ಸರ್ಕಾರ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಬೀಚ್‍ಗೆ ಅಗತ್ಯ ಮೂಲ ಸೌಕರ್ಯ ಯೋಜನೆ ಕಲ್ಪಿಸಿತ್ತು. ಸೆಪ್ಟೆಂಬರ್ ನನಲ್ಲಿ ಪರಿಸರ ತಜ್ಞರು, ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರೀಯ ಸ್ವತಂತ್ರ ನಿರ್ಣಾಯಕ ತಂಡದ ಪರಿಶೀಲನೆ ಬಳಿಕ ಅಂತಾರಾಷ್ಟ್ರೀಯ ಮಾನ್ಯತೆಗೆ ಶಿಫಾರಸು ಗೊಳಿಸಿದೆ.

ಯೋಜನೆಯಲ್ಲಿ ಪರಿಸರ ಸ್ನೇಹಿ ವಸ್ತು ಬಳಸಿ, ಜೈವಿಕ ಶೌಚಾಲಯ, ಬಟ್ಟೆ ಬದಲಾವಣೆ ಹಾಗೂ ಸ್ನಾನದ ಕೊಠಡಿ, ಫಲಕ, ಜಾಗಿಂಗ್ ಟ್ರ್ಯಾಕ್, ಹೊರಾಂಗಣ ಜಿಮ್, ಮಕ್ಕಳ ಮನೋರಂಜನೆ ಚಟುವಟಿಕೆ, ಪ್ಲಾಸ್ಟಿಕ್ ಬಾಟಲ್ ಬಳಕೆ ನಿಯಂತ್ರಿಸಲು ಶುದ್ಧ ಕುಡಿಯುವ ನೀರಿನ ಘಟಕ, ಘನತ್ಯಾಜ್ಯ ಸಂಯೋಜನೆ ಮತ್ತು ಮರುಬಳಕೆ, ಕಸ ಸಂಗ್ರಹ ಬುಟ್ಟಿ, ಆಸನ ಅಳವಡಿಕೆ, ದಿವ್ಯಾಂಗರಿಗೆ ಗಾಲಿಕುರ್ಚಿ, ಸೌರಶಕ್ತಿ ಬಳಕೆ ಹಾಗೂ ರಾತ್ರಿ ಬಳಕೆಗೆ ಎಲ್‍ಇಡಿ ಬಲ್ಬ್ , ಛತ್ರಿಗಳೊಂದಿಗೆ ಲ್ಯಾಂಜರ್ ಕುರ್ಚಿ ಅಳವಡಿಕೆ, ಇಟಿಪಿ ಮೂಲಕ ನೀರಿನ ಮರುಬಳಕೆ, 24*7 ಸಿಸಿ ಟಿವಿ ಕಣ್ಗಾವಲು, ಸುರಕ್ಷತಾ ಧ್ವಜಗಳು, ವೀಕ್ಷಣೆ ಗೋಪುರ ನಿರ್ಮಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

13/10/2020 12:12 pm

Cinque Terre

24.61 K

Cinque Terre

6

ಸಂಬಂಧಿತ ಸುದ್ದಿ