ಉಡುಪಿ: ಬಸ್ಸೊಂದರಲ್ಲಿ ಹಾಕಿದ್ದ ಹಳೆ ಹಾಡಿನ್ನು ಅಸ್ವಾದಿಸುತ್ತಾ ಹೆಜ್ಜೆ ಹಾಕಿದ ವಯೋವೃದ್ದರೊಬ್ಬರ ವಿಡಿಯೋವೊಂದು ವೈರಲ್ ಅಗುತ್ತಿದೆ.
ಉಡುಪಿಯಿಂದ ಹೂಡೆ ಕಡೆ ತೆರಳುವ ಹೆಚ್ ಎಂ ಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ದರು ಹಳೆ ಹಾಡನ್ನು ಕೇಳಿ ಖುಷಿಯಿಂದ ಹೆಜ್ಜೆಹಾಕಿದ್ದಾರೆ.ವೃದ್ಧರು ಬಸ್ ನಲ್ಲಿ ನಿಂತೇ ಪ್ರಯಾಣಿಸುತ್ತಿದ್ದರೂ ಬಸ್ ನಲ್ಲಿ ಬರುತ್ತಿದ್ದ ತಮ್ಮ ಜಮಾನಾದ ಹಾಡನ್ನು ತಾವೂ ಗುನುಗುತ್ತಾ ,ಹೆಜ್ಜೆ ಹಾಕುದ್ದು ಪ್ರಯಾಣಿಕರನ್ನು ಅಚ್ಚರಿಗೆ ತಳ್ಳಿದೆ.ಮಾತ್ರವಲ್ಲ ,ವಯೋವೃದ್ಧರ ಜೀವನೋತ್ಸಾಹಕ್ಕೆ ಜನ ಮೆಚ್ಚುಗೆಯ ಮಾತಾಡಿದ್ದಾರೆ. ಪ್ರಯಾಣಿಕರೊಬ್ವರು ಇದನ್ನು ಮೊಬೈಲಲ್ಲಿ ಚಿತ್ರೀಕರಿಸಿದ್ದು ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
PublicNext
29/09/2022 09:45 pm