ಉಡುಪಿ: 1986 ರಲ್ಲಿ ಒಂದು ಮಾಮೂಲಿ ಟೈಲರಿಂಗ್ ಶಾಪ್ ಆಗಿ ಪ್ರಾರಂಭಗೊಂಡಿದ್ದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಮೂರೂವರೆ ದಶಕಗಳಲ್ಲಿ ಗ್ರಾಹಕರ ನೆಚ್ಚಿನ ಮಳಿಗೆಯಾಗಿ ರೂಪುಗೊಂಡಿದ್ದು ಇತಿಹಾಸ. ವಿಶೇಷ ಎಂದರೆ 1986 ರಲ್ಲಿ ನವರಾತ್ರಿ ಸಂದರ್ಭವೇ ಸಣ್ಣದಾಗಿ ಈ ಶಾಪ್ ಆರಂಭಗೊಂಡಿತ್ತು. ಇವತ್ತು ನವರಾತ್ರಿ ಹಬ್ಬ ಪ್ರಾರಂಭಗೊಂಡಿದೆ. ಆದ್ದರಿಂದ ನವರಾತ್ರಿ ಬಂತೆಂದರೆ ಗೀತಾಂಜಲಿಗೆ ವಿಶೇಷ ಸಂಭ್ರಮ, ಸಡಗರ.
ಇವತ್ತು ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧರ ತನಕ ಇಲ್ಲಿ ಸಿಗದ ಬಟ್ಟೆಗಳಿಲ್ಲ. ಉಡುಪಿಯ ಪರಿಪೂರ್ಣ ಫ್ಯಾಮಿಲಿ ಡ್ರೆಸ್ ಶಾಪ್ ಎಂದರೂ ತಪ್ಪಲ್ಲ.ಇಲ್ಲಿಗೆ ಬಂದರೆ ಬರಿಗೈಯಲ್ಲಿ ವಾಪಾಸು ಹೋಗೋ ಮಾತೇ ಇಲ್ಲ.
ಹಂತಹಂತವಾಗಿ ಬೆಳೆದ ಆರ್ ಕೆ ,ಇವತ್ತು ಗೀತಾಂಜಲಿಯಾಗಿ ಎತ್ತರಕ್ಕೆ ಬೆಳೆದಿದೆ. ಉತ್ಕೃಷ್ಟ ಮಟ್ಟದ ರೆಡಿಮೇಡ್ ಬಟ್ಟೆಗಳನ್ನು ದೇಶದ ಮೂಲೆಯಿಂದ ತರುವ ಗೀತಾಂಜಲಿ, ಗ್ರಾಹಕರ ತೃಪ್ತಿಯನ್ನೇ ತನ್ನ ಧ್ಯೇಯ ವಾಕ್ಯ ಮಾಡಿಕೊಂಡಿದೆ.
ಗಮನಾರ್ಹ ಸಂಗತಿಯೆಂದರೆ ಸಂಸ್ಥೆಯು 400- 500 ಯುವಕ ಯುವತಿಯರಿಗೆ ಉದ್ಯೋಗಾವಕಾಶವನ್ನೂ ನೀಡಿದೆ. ಕಳೆದ ಆರೇಳು ವರ್ಷಗಳಿಂದ ಅತ್ಯಾಧುನಿಕ, ಹವಾನಿಯಂತ್ರಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಗೋವಾಗಳಿಂದಲೂ ಜನರು ಈ ಮಳಿಗೆಗೆ ಬರುತ್ತಿರುವುದು, ಗೀತಾಂಜಲಿಯ ಸೇವಾನಿಷ್ಠೆಯನ್ನು ತೋರಿಸುತ್ತದೆ. ನವರಾತ್ರಿಯ ಶುಭವಸರದಲ್ಲಿ ಮಳಿಗೆಯ ಮುಖ್ಯಸ್ಥರಾದ ಆರ್ ಕೆ, ತಮ್ಮ ಗ್ರಾಹಕರಿಗೆ ಮತ್ತು ಜನತೆಗೆ ಶುಭಾಶಯ ಕೋರಿದ್ದಾರೆ.
PublicNext
27/09/2022 04:49 pm