ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕಾರ್ಕಳದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮೀಲಾದ್ ಅಭಿಯಾನ

ಕಾರ್ಕಳ : `ಪ್ರವಾದಿ ಮುಹಮ್ಮದ್ (ಸ.ಅ.)ರವರ ಜೀವನ ಆದರ್ಶಗಳು ಮನುಷ್ಯ ಕುಲಕ್ಕೆ ಬದುಕಿನ ಬಹುದೊಡ್ಡ ನೀತಿ ಪಾಠವಾಗಿದೆ. ಪ್ರವಾದಿಯವರು ಬದುಕಿದ ರೀತಿ, ತೋರಿಸಿದ ಸತ್ಪಥ ಯೋಗ್ಯ ರೀತಿಯ ಬದುಕಿಗೆ ದಾರಿದೀಪವಾಗಿದೆ. ಅಲ್ಲಾಹನು ಭೂಮಿಯ ಮೇಲೆ ಶಾಂತಿಯನ್ನು ಮರುಸ್ಥಾಪಿಸಲು ಮುಹಮ್ಮದ್ ಮುಸ್ತಪಾ (ಸ.ಅ.) ಅವರಿಗೆ ಬಹುದೊಡ್ಡ ಉತ್ತರದಾಯಿತ್ವವನ್ನು ನೀಡುತ್ತಾನೆ. ಅವರ ಆಗಮನಕ್ಕೂ ಮೊದಲು ಈ ಜಗತ್ತಿನಲ್ಲಿ ತುಂಬಿದ್ದ ಮೌಡ್ಯ ಅಂಧಕಾರಗಳ ಬಗ್ಗೆ ಇತಿಹಾಸಕಾರರು ಸಂಶೋಧನೆಯನ್ನು ನಡೆಸಿ, ದಾಖಲಿಸಿದ್ದು, ಪ್ರವಾದಿಯವರ ಆಗಮನದ ಬಳಿಕ ಶಾಂತಿ ಸ್ಥಾಪನೆ ಸಾಧ್ಯವಾಗಿತ್ತು, ಶಾಂತಿಧೂತರಾದ ಪ್ರವಾದಿಯವರ ಸತ್ಯನುಡಿಗಳು ನಾಡಿನ ಜನರಿಗೆ ಅರಿವಾಗಬೇಕೆಂಬುದು ನಮ್ಮ ಉದ್ದೇಶ" ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ಘಟಕ ಅಧ್ಯಕ್ಷರಾದ ಮುಬೀನ್ ಹೇಳಿದರು.

ಇತ್ತೀಚಿನ ಶತಮಾನದಲ್ಲಿ ವ್ಯಾಪಕವಾಗುತ್ತಿರುವ ಇಸಂಗಳು, ಆಶ್ಲೀಲತೆ, ನಶೆ, ಲಂಚ, ಭ್ರಷ್ಟಾಚಾರ ಮುಂತಾದ ಕಾಡುಗುಗಳ ಬಗ್ಗೆ ಪ್ರವಾದಿಯವರು ತಮ್ಮ ಜೀವನ ಪಾಠದ ಮೂಲಕ ಕಲಿಸಿಕೊಡಬೇಕಿದೆ. ಜನರೆಡೆಯಲ್ಲಿ ಇಂದು ಇಸ್ಲಾಂ ಧರ್ಮವನ್ನು ದ್ವೇಷಿಸುವಂತೆ ಬಿಂಬಿಸುವ ಷಡ್ಯಂತ್ರಗಳು ವ್ಯಾಪಕವಾಗುತ್ತಿದೆ. ಆದರೆ ಇಸ್ಲಾಂ ಏನು ಎಂಬ ಬಗ್ಗೆ ಮುಸ್ಲಿಮರು ತಮ್ಮ ಬದುಕಿನ ರೀತಿಯ ಮೂಲಕ ತೋರಿಸಿಕೊಡಬೇಕಿದೆ, ಮಹಾತ್ಮಗಾಂಧಿ, ಬಸವಣ್ಣನವರು, ಶ್ರೀ ನಾರಾಯಣಗುರುಗಳು ಹೀಗೆ ಅನೇಕ ಮಹಾಪುರುಷರು ಬಯಸಿದ ಶಾಂತಿಯ, ಸಾಮರಸ್ಯದ ಬದುಕನ್ನೇ ಪ್ರವಾದಿಯವರು ಬಯಸಿದ್ದು, ಆ ಮೂಲಕ ವಿಶ್ವಶಾಂತಿಯೇ ನಮ್ಮೆಲ್ಲರ ಧೈಯವಾಗಬೇಕು. ಈ ಕಾರಣದಿಂದಲೇ ಪ್ರವಾದಿಯವರ ಜನ್ಮದಿನ ಆಚರಣೆ ನಡೆಯುವ ರಬೀಉಲ್ ಅವ್ವಲ್ ಅರೇಬಿಕ್ ತಿಂಗಳಲ್ಲಿ ಜಮಾಅತೇ ಇಸ್ಲಾಮೀ ಹಿಂದ್ ಅಭಿಯಾನವನ್ನು ನಡೆಸುತ್ತಿದೆ' ಎಂದರು.ಅವರು ಜಮಾಆತ ಇಸ್ಲಾಮಿ ಹಿಂದ್ ಕಾರ್ಕಳ ಘಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

'ಅಭಿಯಾನದಲ್ಲಿ ನೈತಿಕ ಮೌಲ್ಯಗಳ ಪ್ರಚಾರ, ಪರಸ್‌ರ ಅರಿಯುವುದು, ಪ್ರವಾದಿ ವಚನಗಳು ಹಾಗೂ ಸಂದೇಶ ಪ್ರಚಾರ, ಪ್ರಬಂಧ ಸ್‌ಪರ್ಧೆ, ಶುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡನೆಡುವುದು, ಆಸ್ಪತ್ರೆಯಲ್ಲಿ ರೋಗಿಗಳ ಭೇಟಿ ಹೀಗೆ ಅನೇಕ ಕಾರ್ಯಕ್ರಮಗಳು ಸಂಘಟನೆಯ ವತಿಯಿಂದ ನಡೆಯಲಿದೆ' ಎಂದು ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

20/10/2021 05:01 pm

Cinque Terre

4.82 K

Cinque Terre

0