ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಶಾಸಕರಿಂದ ಸ್ವಸಹಾಯ ಸಂಘಗಳ 10 ಫಲಾನುಭವಿಗಳಿಗೆ ಕೋಳಿ ಘಟಕ ವಿತರಣೆ

ಕಳತ್ತೂರು: ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಕೆಂಜೂರು ಕಲ್ಲುಗುಡ್ಡೆ ಕೊರಗ ಕಾಲೋನಿಯ ಸಂಜೀವಿನಿ ಸ್ವಸಹಾಯ ಸಂಘಗಳ 10 ಫಲಾನುಭವಿಗಳಿಗೆ ಕೋಳಿ ಘಟಕ ವಿತರಣೆ ಕಾರ್ಯಕ್ರಮ ನಡೆಯಿತು.ಉಡುಪಿ ವಿಧಾನಸಭೆ ಕ್ಷೇತ್ರದ ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಕೊರಗ ಸಮುದಾಯದವರು ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಇಂತಹ ಆರ್ಥಿಕ ಬಲವರ್ಧನೆಯ ಚಟುವಟಿಕೆಗಳನ್ನು ನಡೆಸುವ ಮೂಲಕ ಮಹಿಳೆಯರು ಕೂಡ ಸದೃಢರಾಗಿ ಸಮಾಜಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ ವಹಿಸಿದ್ದರು.ಅತಿಥಿಗಳಾಗಿ ಕಳತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನವೀನ ಕುಮಾರ್ ,ಸದಸ್ಯರಾದ ಆದರ್ಶ ಶೆಟ್ಟಿ ,ಚಂದ್ರಶೇಖರ್ ಶೆಟ್ಟಿ ,ಮಂಜುಳಾ ನಾಯ್ಕ್ ,ಉಷಾ ,ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ,ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ,ಕಳತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬನಶಂಕರಿ ,ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಿರಿಯಣ್ಣ ಶೆಟ್ಟಿ ,ಕೊರಗ ಮುಖಂಡರಾದ ಬೊಗ್ರ ,ಗೌರಿ, ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮ್ಮಣ್ಣಿ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/10/2021 09:49 pm

Cinque Terre

7.33 K

Cinque Terre

0