ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮೂವರು ಪ್ರವಾಸಿಗರ ರಕ್ಷಣೆ!

ಮಲ್ಪೆ: ಮಲ್ಪೆ ಬೀಚ್ ಗೆ ಬಂದಿದ್ದ ಮೂವರು ಪ್ರವಾಸಿಗರನ್ನು ಅಪಾಯದಿಂದ ರಕ್ಷಣೆ ಮಾಡಲಾಗಿದೆ.ಬೀಚ್ ಗೆ ಆಟವಾಡಲು ನೀರಿಗೆ ಇಳಿದಿದ್ದ ಕೊಪ್ಪಳ ಜಿಲ್ಲೆಯ ಬನಕಟ್ಟಿ ಗ್ರಾಮದ ಪವನ್, ಚೇತನ್ ಮತ್ತು ಪ್ರಿಯದರ್ಶಿನಿ ಎಂಬವರೇ ರಕ್ಷಣೆಗೆ ಒಳಗಾದ ಪ್ರವಾಸಿಗರು.ಸಂಜೆ ವೇಳೆ ಬೀಚ್ ಗೆ ಆಗಮಿಸಿದ್ದ ಇವರು ಆಟವಾಡುತ್ತಾ ಸಮುದ್ರದ ಆಳಕ್ಕೆ ಹೋಗಿದ್ದಾರೆ.ಈ ವೇಳೆ ಮುಳುಗುವ ಹಂತದಲ್ಲಿ‌ದ್ದ ಮೂವರನ್ನು ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿ ಜೀವ ಉಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/10/2021 07:53 pm

Cinque Terre

6.17 K

Cinque Terre

0