ಮಣಿಪಾಲ: ಎಪಿಐ ಉಡುಪಿ- ಮಣಿಪಾಲ ಚಾಪ್ಟರ್ ಮತ್ತು ಕೆ ಎಂ ಸಿ ಮಣಿಪಾಲ ವೈದ್ಯಕೀಯ ವಿಭಾಗ, ಮಾಹೆ ಮಣಿಪಾಲದ ಸಂಯುಕ್ತ ಆಶ್ರಯದಲ್ಲಿ ಹೋಟೆಲ್ ಮಣಿಪಾಲ್ ಇನ್ ನಲ್ಲಿ ಎಪಿಐ ಕರ್ನಾಟಕ ಚಾಪ್ಟರ್ ವಾರ್ಷಿಕ ಸಮ್ಮೇಳನ- ಕಾಪಿಕಾನ್ 2020-21 ಅನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು. "ಉದಯೋನ್ಮುಖ ಸವಾಲುಗಳಿಗೆ ವೈದ್ಯರನ್ನು ಸಬಲೀಕರಣಗೊಳಿಸುವುದು" ಸಮ್ಮೇಳನದ ಧ್ಯೇಯ ವಾಕ್ಯವಾಗಿತ್ತು. ಸಮ್ಮೇಳನದ ಉದ್ಘಾಟನೆಯನ್ನು ಸೆಪ್ಟೆಂಬರ್ ಮುಖ್ಯ ಅತಿಥಿಯಾಗಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್ ಬಲ್ಲಾಳ್ ನೆರವೇರಿಸಿದರು.
ಮಾಹೆ ಮಣಿಪಾಲದ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ , ಸಹ ಕುಲಪತಿ (ಆರೋಗ್ಯ ವಿಜ್ಞಾನ )ಗಳಾದ ಡಾ. ಪಿ ಎಲ್ ಎನ್ ಜಿ ರಾವ್ , ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್ ಗೌರವ ಅಥಿತಿಗಳಾಗಿ ಪಾಲ್ಗೊಂಡಿದ್ದರು . ಡಾ. ಶರತ್ ಕೆ ರಾವ್ ಉದ್ಘಾಟನಾ ಭಾಷಣ ಮಾಡಿದರು.ಕರ್ನಾಟಕ ಎ ಪಿ ಐ ಚಾಪ್ಟರ್ ನ ಮುಖ್ಯಸ್ಥರಾದ ಡಾ. ವಿ ಎ ಕೋಥಿವಾಳೆ ,ಚುನಾಯಿತ ಕಾಪಿಕಾನ್ 2020-21ರ ವಿಜ್ಞಾನ ಸಮಿತಿಯ ಮುಖ್ಯಸ್ಥರಾದ ಡಾ ಎಚ್ ಕೆ ರಾಜಶೇಖರ್ , ಕರ್ನಾಟಕ ಎ ಪಿ ಐ ಚಾಪ್ಟರ್ ನ ಕಾರ್ಯದರ್ಶಿಗಳಾದ ಡಾ. ಎಂ ನಾರಾಯಣಸ್ವಾಮಿ, ಕಾಪಿಕಾನ್ 2020-21ರ ಸಂಘಟನಾ ಮುಖ್ಯಸ್ಥರಾದ ಡಾ. ಸುಧಾ ವಿದ್ಯಾಸಾಗರ್ , ಸಂಘಟನಾ ಕಾರ್ಯದರ್ಶಿ ಡಾ. ಶಿವಶಂಕರ್ ಕೆ ಎನ್ , ಜೊತೆ ಕಾರ್ಯದರ್ಶಿಗಳಾದ, ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ರವಿರಾಜ್ ಆಚಾರ್ಯ , ಆದರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು. ಡಾ.ಶಿವಶಂಕರ್ ಕೆ.ಎನ್ ಅವರ ಸಮಾರೋಪದ ಮಾತುಗಳೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
Kshetra Samachara
21/09/2021 05:37 pm