ಉಡುಪಿ: ಅಷ್ಟಮಿ ಹಬ್ಬದ ಸಂದರ್ಭ ಕೃಷ್ಣನಗರಿಯಲ್ಲಿ ವಿವಿಧ ವೇಷಗಳದ್ದೇ ಅಬ್ಬರ. ಬೀದಿ ಬೀದಿಗಳಲ್ಲಿ ವೇಷ, ಹೆಜ್ಜೆ ಹೆಜ್ಜೆಗೂ ಬಣ್ಣದ ವೇಷಗಳದ್ದೇ ಕಾರುಬಾರು.ಇದರ ಜೊತೆಗೆ ವೇಷಧಾರಿಗಳ ಸ್ಪರ್ಧೆಗಳೂ ಇರುತ್ತವೆ. ಇವನ್ನೆಲ್ಲ ನೋಡಿ ಜನ ಹುಚ್ಚೆದ್ದು ಕುಣಿಯುವುದೂ ಇದೆ.
ಉಡುಪಿಯ ಬೀದಿಯೊಂದರಲ್ಲಿ ವೇಷಧಾರಿಯೊಂದಿಗೆ ಯುವತಿಯೊಬ್ಬಳು ಹೆಜ್ಜೆ ಹಾಕಿದ ದೃಶ್ಯ ಸದ್ಯ ಸಖತ್ ವೈರಲ್ ಆಗುತ್ತಿದೆ. ಭಗವತಿ ನಾಸಿಕ್ ಬ್ಯಾಂಡ್ ಕಲಾವಿದರ ಜೊತೆ ಈ ಯುವತಿ ಸೂಪರ್ ಡ್ಯಾನ್ಸ್ ಮಾಡಿದ್ದಾಳೆ. ಈಕೆಯ ಡ್ಯಾನ್ಸಿಂಗ್ ಸ್ಟೈಲ್ ಗೆ ಸ್ಪರ್ಧೆ ಕೊಡುವಂತೆ ವೇಷದಾರಿಯೂ ಹೆಜ್ಜೆ ಹಾಕಿದ್ದಾನೆ.
Kshetra Samachara
20/08/2022 01:17 pm