ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಜ್ಜಿಯನ್ನು ಕಂಡು ಭಾವುಕರಾದ ಮಿಸ್ ಇಂಡಿಯಾ!

ಉಡುಪಿ: ಮಿಸ್ ಇಂಡಿಯಾ ಕಿರೀಟ ಗೆದ್ದ ಬಳಿಕ ಇವತ್ತು ಮೊದಲ ಬಾರಿಗೆ ಸಿನಿ ಶೆಟ್ಟಿ ಹುಟ್ಟೂರಿಗೆ ಆಗಮಿಸಿದರು.ಇಲ್ಲಿ ಅದ್ಧೂರಿ ಸ್ವಾಗತದ ಬಳಿಕ ಮೆರವಣಿಗೆ ಮೂಲಕ ಅಮ್ಮಣ್ಣಿ ರಾಮಣ್ಣ ಸಭಾಭವನಕ್ಕೆ ಕರೆತರಲಾಯಿತು. ಅಲ್ಲಿ ಅಜ್ಜಿಯನ್ನು ಬಿಗಿದಪ್ಪಿಕೊಂಡು, ಮಾತನಾಡಿಸಿದ ಸಿನಿ ಶೆಟ್ಟಿ ಒಂದು ಕ್ಷಣ ರೋಮಾಂಚನಗೊಂಡರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಿನಿ ಶೆಟ್ಟಿ,ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು. ನಾನು ಎಲ್ಲೇ ಹೋದರೂ, ಯಾವುದೇ ಉಡುಗೆ ತೊಟ್ಟರೂ ನನಗೆ ಬೆಂಬಲವಾಗಿದ್ದರು. ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಿದ್ದರು.ಇವತ್ತು ಎಲ್ಲರೂ ನನ್ನನ್ನು ಗುರುತಿಸಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದರು.

ತುಳು ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಿದ ಅವರು, ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ನಿನ್ನೆ ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ.ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು. ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ.ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಗೀತ ನಿರ್ದೇಶಕ ಗುರುಕಿರಣ್, ಮಿಸ್ ವರ್ಲ್ಡ್ ಗೆ ಗ್ಲಾಮರ್ ನೀಡಿದ್ದು ಕರಾವಳಿಯ ಐಶ್ವರ್ಯಾ ರೈ. ಸಿನಿ ಶೆಟ್ಟಿಗೂ ಆ ಅವಕಾಶ ಇದೆ. ಹೀಗಾಗಿ ಅವಳನ್ನು ಅಭಿನಂದಿಸಲು ಬಂದಿದ್ದೇನೆ ಎಂದು ಹೇಳಿದರು.

Edited By : Manjunath H D
PublicNext

PublicNext

19/07/2022 06:51 pm

Cinque Terre

30.76 K

Cinque Terre

3

ಸಂಬಂಧಿತ ಸುದ್ದಿ