ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಚಿಣ್ಣರಿಗೆ 'ಬಣ್ಣ'ದ ಕಾರ್ಯಾಗಾರ; ಮೊಬೈಲ್ ಬಿಟ್ಟು ಮುಖಕ್ಕೆ ಬಣ್ಣ ಹಚ್ಚಿದ ಸಂಭ್ರಮಿಸಿದ ಮಕ್ಕಳು!

ಮಂಗಳೂರು: ಯಕ್ಷಗಾನವೆಂದರೆ ಬರೀ ಭಾಗವತಿಕೆ, ಅರ್ಥಗಾರಿಕೆ, ಕುಣಿವಷ್ಟೇ ಅಲ್ಲ. ಆಹಾರ್ಯವೂ ಅಷ್ಟೇ ಮುಖ್ಯವಾಗುತ್ತದೆ. ಆಹಾರ್ಯದಲ್ಲಿ ಬಣ್ಣಗಾರಿಕೆ ಹಾಗೂ ವೇಷಭೂಷಣಗಳು ಪ್ರಧಾನ. ಯಕ್ಷಗಾನದಲ್ಲಿ ಬಣ್ಣಗಾರಿಕೆ ಒಂದು ಕಲೆ. ಈ ಸೂಕ್ಷ್ಮ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಣ್ಣ ಪ್ರಯತ್ನವೊಂದು ಸದ್ದಿಲ್ಲದೆ ಮಂಗಳೂರಿನ ಆಕಾಶಭವನದಲ್ಲಿ ನಡೆಯಿತು.

ಹೌದು. ಇಲ್ಲಿ ಸಣ್ಣ ಸಣ್ಣ ಚಿಣ್ಣರು ಕಡ್ಡಿ ಹಿಡಿದುಕೊಂಡು ಮುಖಕ್ಕೆ ಬಣ್ಣ ಹಾಕುತ್ತಿದ್ದರು. ಮೊದಲ ಬಾರಿಗೆ ಯಕ್ಷಗಾನದ ಬಣ್ಣವನ್ನು ಮುಖಕ್ಕೆ ಹಚ್ಚಿ ಸಂಭ್ರಮಪಟ್ಟರು. ತಂಕುತಿಟ್ಟಿನ ಪ್ರಖ್ಯಾತ ಬಣ್ಣದ ವೇಷಧಾರಿ ಶಶಿಕಿರಣ್ ಕಾವು ಈ ಮಕ್ಕಳಿಗೆ ಬಣ್ಣಗಾರಿಕೆಯ ಮೊದಲ ಹೆಜ್ಜೆಯನ್ನು ಕಲಿಸಿದರು. ಬೇಸಿಕ್ ಸಪೇತ್ ಬಣ್ಣವನ್ನು ಹಚ್ಚುವ ಕ್ರಮವನ್ನು ಮಕ್ಕಳಿಗೆ ಅಭ್ಯಾಸ ಮಾಡಿದರು.

ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನವು ಉತ್ಸುಕತೆಯಿಂದ 'ರಿಷಿ ವರ್ಣ ಸಂಭ್ರಮ'ವೆಂಬ ಈ ಉಚಿತ ಯಕ್ಷಗಾನ ಬಣ್ಣಗಾರಿಕಾ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಮೂಲಕ ಮಕ್ಕಳು ಯಕ್ಷಗಾನದತ್ತ ಆಕರ್ಷಿತರಾಗಲು ವಿಭಿನ್ನ ಪ್ರಯತ್ನವೊಂದನ್ನು ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ಮಕ್ಕಳಿಗೆ ಈ ಬಣ್ಣಗಾರಿಕೆ ತರಬೇತಿ ಕಾರ್ಯಾಗಾರವನ್ನು ಮಾಡಲಾಗಿತ್ತು. ಸಾಧಾರಣವಾಗಿ ಮುಮ್ಮೇಳ - ಹಿಮ್ಮೇಳ ತರಗತಿಗಳು ಅಲ್ಲಲ್ಲಿ‌ ನಡೆಯುತ್ತಿರುತ್ತದೆ. ಆದರೆ ಯಕ್ಷಗಾನದ ವೇಷಧಾರಿಗಳಿಗೆ ಅವಶ್ಯಕ ತರಬೇತಿ ಬೇಕಾಗುವ ಬಣ್ಣಗಾರಿಕೆ ವಿಚಾರದ ತರಬೇತಿ ಎಲ್ಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಈ ರೀತಿ ಬಣ್ಣಗಾರಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿದ ಈ ಮಕ್ಕಳು ಮುಂದೆ ರಂಗದಲ್ಲಿ ಮಹೋನ್ನತ ಕಲಾವಿದರಾಗಿ ಮೆರೆಯಲಿ ಎಂಬುದೇ ಪಬ್ಲಿಕ್ ನೆಕ್ಸ್ ನ ಸದಾಶಯ

Edited By : Somashekar
Kshetra Samachara

Kshetra Samachara

13/06/2022 07:49 pm

Cinque Terre

17.87 K

Cinque Terre

0

ಸಂಬಂಧಿತ ಸುದ್ದಿ