ಉಡುಪಿ: ಉಡುಪಿಯ ಇತಿಹಾಸ ಪ್ರಸಿದ್ಧ ಕ್ಷೇತ್ರ ಪಣಿಯಾಡಿ ಶ್ರೀಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 1ರಿಂದ ಆರಂಭವಾಗಿದ್ದು, 7ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಉಡುಪಿ ರಥಬೀದಿಯ ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀಅನಂತೇಶ್ವರ ಮತ್ತು ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪುತ್ತಿಗೆ
ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಊರಿನ ಭಕ್ತರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಹಸಿರು ಹೊರೆಕಾಣಿಕೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ನಂತರ ರಥಬೀದಿಯಿಂದ ಹೊರಟ ಭವ್ಯ ಹೊರೆಕಾಣಿಕೆ ಮೆರವಣಿಗೆ ನಗರದ ಕಲ್ಸಂಕ ಮಾರ್ಗವಾಗಿ ದೇವಾಲಯಕ್ಕೆ ತಲುಪಿತು. ವೇದಘೋಷ, ಬಿರುದಾವಲಿ, ಚೆಂಡೆ, ಮಹಿಳಾ ಚೆಂಡೆ ಬಳಗ, ಭಜನಾ ತಂಡಗಳು, ಕೀಲುಕುದುರೆ, ಬ್ಯಾಂಡ್, ಹುಲಿವೇಷ, ನಾಶಿಕ್ ಬ್ಯಾಂಡ್ ಮೆರವಣಿಗೆಗೆ ಮೆರುಗು ನೀಡಿದವು.
ತರಕಾರಿ, ಅಕ್ಕಿ, ಬೆಲ್ಲ, ಧಾನ್ಯ ಹಾಗೂ ಬ್ರಹ್ಮಕಲಶೋತ್ಸವದ ಪ್ರಧಾನ ಚಿನ್ನಲೇಪಿತ ಬೆಳ್ಳಿಕಲಶ ಹಾಗೂ ದೇವರಿಗೆ ನೂತನ ಪಲ್ಲಕಿ ಹಾಗೂ ದೇವಾಲಯದ ಹೆಬ್ಬಾಗಿಲಿನ ಕಂಚಿನ ದ್ವಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮದ ವಸ್ತುಗಳನ್ನು ಶ್ರೀಪಾದರ ಸಮ್ಮುಖದಲ್ಲಿ ದೇವರಿಗೆ ಅರ್ಪಿಸಲಾಯಿತು.
Kshetra Samachara
02/05/2022 06:36 pm