ಉಡುಪಿ: ಹಿಜಾಬ್ ಕುರಿತು ಇವತ್ತು ಸುಪ್ರೀಂ ಕೋರ್ಟ್ ನಿಂದ ಸಂವಿಧಾನಬದ್ಧ ತೀರ್ಪು ಬರುವ ನಿರೀಕ್ಷೆ ಇದೆ. ಏನೇ ಬಂದರೂ ಸಮಾಜದ ಒಳಿತು ಮತ್ತು ಸೌಹಾರ್ದತೆ ಮುಖ್ಯ ಸುಪ್ರೀಂ ಕೋರ್ಟ್ ನಿಂದ ಬರುವ ತೀರ್ಪನ್ನು ನಾವು ಸ್ವಾಗತಿಸೋಣ ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಘಟನೆ ಸಂಚಾಲಕ ಹುಸೇನ್ ಕೊಡಿಬೆಂಗ್ರೆ ಹೇಳಿಕೆ ನೀಡಿದ್ದಾರೆ.
ಹಿಜಬ್ ಹಕ್ಕಿಗಾಗಿ ಪ್ರತಿಪಾದಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಸಂಘಟನೆಯ ಸಂಚಾಲಕ ಹುಸೇನ್ ಕೊಡಿಬೆಂಗ್ರೆ, ಧನಾತ್ಮಕ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ.ದೇಶದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದ್ದಾರೆ.
PublicNext
13/10/2022 11:58 am