ಉಡುಪಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ 2020ರ ಅ.13 ಮತ್ತು 2021ರ ನ.10ರಂದು ವಾಹನ ಪ್ರಯಾಣ ದರ ಪರಿಷ್ಕರಿಸಿ ನಿಗದಿಪಡಿಸಿದ ದರ ಜಾರಿಯಲ್ಲಿದ್ದರೂ ಕೆಲವು ಬಸ್ ಗಳಲ್ಲಿ ಪ್ರಯಾಣಿಕರಿಂದ ಅಧಿಕ ಪ್ರಯಾಣ ದರ ವಸೂಲು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಮಾಜಸೇವಕರಾದ ಶಿವಕುಮಾರ್ ಶೆಟ್ಟಿಗಾರ್ ಹಾಗೂ ಸತೀಶ್ ಪೂಜಾರಿ ಅವರ ನೇತೃತ್ವದಲ್ಲಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಾರಿಗೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ ಅಧಿಕ ದರ ವಸೂಲು ಮಾಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.ಒಂದು ವೇಳೆ ಮುಂದಿನ ದಿನಗಳಲ್ಲಿ ಅಧಿಕ ದರ ವಸೂಲಿ ಪ್ರವೃತ್ತಿ ಮುಂದುವರೆಸಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವಕುಮಾರ್ ಶೆಟ್ಡಿಗಾರ್ ಎಚ್ಚರಿಕೆ ನೀಡಿದ್ದಾರೆ.
Kshetra Samachara
05/10/2022 11:02 am